ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಹೆಚ್ಚಿನವರ ದೇಹದ ತೂಕ ಹೆಚ್ಚಾಗುತ್ತಿದೆ. ಅದನ್ನು ಇಳಿಸಲು ಹಲವು ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ದೇಹದ ತೂಕ ಇಳಿಸಲು ಒಂದು ಬೆಸ್ಟ್ ಮನೆಮದ್ದು ಇಲ್ಲಿದೆ.
ಜೇನುತುಪ್ಪ ಹಾಗೂ ಬೆಳ್ಳುಳ್ಳಿ ತೂಕ ಇಳಿಸಲು ಬಹಳ ಸಹಕಾರಿ. ಕಾರಣ ಇವುಗಳನ್ನು ಸೇವಿಸಿದರೆ ಹಸಿವು ಆಗುವುದಿಲ್ಲ. ಆದ್ದರಿಂದ ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದೊಳಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಿ.
ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ಮಿಶ್ರಣವನ್ನು ತಿನ್ನಿ. ಹೀಗೆ ಮಾಡುತ್ತಾ ಬಂದರೆ ಶೀಘ್ರದಲ್ಲಿಯೇ ನಿಮ್ಮ ದೇಹದ ತೂಕ ಇಳಿಯುತ್ತದೆ.