ಈ ಒಂದು ಹಣ್ಣನ್ನು ತಿನ್ನುವುದರಿಂದ ವಯಸ್ಸಾದ ಮೇಲೆ ನೆನಪಿನ ಶಕ್ತಿ ಕಡಿಮೆಯಾಗುದಿಲ್ಲವಂತೆ !
ಬುಧವಾರ, 28 ಮಾರ್ಚ್ 2018 (07:13 IST)
ಬೆಂಗಳೂರು : ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದ ಮೇಲೆ ನೆನಪಿನ ಶಕ್ತಿ ಕಡಿಮೆಯಾಗುದು ಸಾಮಾನ್ಯ. ಆದ್ರೆ ಈ ಒಂದು ಹಣ್ಣುನ್ನು ತಿನ್ನುವುದರಿಂದ ನಿಮಗೆ ವಯಸ್ಸಾದ ಮೇಲೆ ಬರುವಂತಹ ಮರೆವು ಇರುವುದಿಲ್ಲ ಅನ್ನೋದು ಸಂಶೋಧನಾ ವರದಿಯಾಗಿದೆ.
ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ವಯಸ್ಸಾದ ಮೇಲೆ ಮರೆಯುವ ಸಮಸ್ಯೆ ಕಾಡುವುದಿಲ್ಲವಂತೆ. ಅಧ್ಯಯನದ ವರದಿ ಪ್ರಕಾರ, ಇದು ವಯಸ್ಸಾದ ಮೇಲೆ ಬುದ್ಧಿಮಾಂದ್ಯ ರೋಗ ಬರದಂತೆ ಕಾಪಾಡುತ್ತದೆಯಂತೆ. ಜಪಾನ್ ನ ತೊಹುಕು ವಿಶ್ವವಿದ್ಯಾನಿಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಸಂಶೋಧಕರ ಪ್ರಕಾರ ಕಿತ್ತಳೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ಅದ್ರಲ್ಲಿರುವ ರಾಸಾಯನಿಕ ಅಂಶವೊಂದು ನೆನಪಿನ ಶಕ್ತಿ ಹಾಳಾಗದಂತೆ ನೋಡಿಕೊಳ್ಳುತ್ತದೆ. ಎನ್ನುವುದು ಸಂಶೋಧನಾ ವರದಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ