ಆಫೀಸ್‌‌ಗೆ ಹೋಗುವವರಿಗಾಗಿ ವ್ಯಾಯಾಮ ಟಿಪ್ಸ್

ಬುಧವಾರ, 23 ಜುಲೈ 2014 (18:01 IST)
ಇತ್ತೀಚಿನ ದಿನಗಳಲ್ಲಿ 9 ಗಂಟೆಯಿಂದ 5 ಗಂಟೆಯವರೆಗಿನ ಉದ್ಯೋಗದ ಅವಧಿಯಲ್ಲಿ ಉದ್ಯೋಗಿಗಳಿಗೆ ಸಮಯದ ಕೊರತೆಯಿಂದಾಗಿ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ
 
ಆಫೀಸ್‌‌ಗೆ ಹೋಗುವ ಉದ್ಯೋಗಿಗಳ ಸಮಯ ನಿಗದಿತ ಅವಧಿಯ ಬಂಧನದಲ್ಲಿ ಇರುತ್ತದೆ. ಆಫೀಸ್‌ನಿಂದ ಬಂದ ಬಳಿಕ ತನ್ನ ಪರಿವಾರದ ಜೊತೆಗೆ ಸಮಯ ಕಳೆಯುವುದು ಮತ್ತು ಜಿಮ್‌ಗೆ ಹೋಗುವುದು ಉತ್ತಮ. 
 
ಈ ಸಮಸ್ಯೆಗೆ ಪರಿಹಾರ ನಾವು ನೀಡುತ್ತಿದ್ದೇವೆ. ಈ ಐದು ಮಾತುಗಳು ಪಾಲಿಸಿ ಮತ್ತು ಆಫೀಸ್‌‌‌ನಲ್ಲಿ ಇದ್ದು ಕೂಡ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ. ನಾವು ನಿಮಗೆ ಸಣ್ಣ ಸಣ್ಣ ವ್ಯಾಯಾಮ ಹೇಳುತ್ತೇವೆ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಬಹುದು ಮತ್ತು ಒತ್ತಡ ಮುಕ್ತವಾಗಿರಬಹುದು. 
 
1. ಲಿಫ್ಟ್‌ ಬಿಡಿ ಮೆಟ್ಟಿಲು ಹತ್ತಿ: ಮೆಟ್ಟಿಲು ಹತ್ತುವುದು ಸರಳ ವ್ಯಾಯಾಮವಾಗಿದೆ. ಈ ತರಹದ ರೂಢಿ ಮಾಡಿಕೊಳ್ಳಿ. ನೀವು ನಿಮ್ಮ ಫ್ಲೋರ್‌‌ವರೆಗೆ ಮೆಟ್ಟಿಲು ಹತ್ತಿ ಹೋಗಿ. ಇದು ನಿಮ್ಮ ಕ್ಯಾಲೋರಿ ಬರ್ನ್ ಆಗುತ್ತದೆ ಮತ್ತು ಹಾರ್ಟ್‌ನಲ್ಲಿ ಪಂಪಿಂಗ್‌‌ ಫಾಸ್ಟ್‌ ಆಗುತ್ತದೆ , ಇದು ನಿಮ್ಮ ಪೂರ್ತಿ ಶರೀರದಲ್ಲಿ ರಕ್ತಸಂಚಲನ ಉತ್ತಮವಾಗಿಸಲು ಸಹಾಯ ಮಾಡುತ್ತದೆ. 
 
2. ಕಣ್ಣುಗಳಿಗಾಗಿ: ಸತತ ಕಂಪ್ಯೂಟರ್‌ ಸ್ಕ್ರೀನ್‌ ಎದುರು ಕುಳಿತುಕೊಳ್ಳುವುದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ನೀವು ಆಂಟಿ ಗ್ಲೆಯರ್ ಕನ್ನಡಕ ಹಾಕಿಕೊಳ್ಳಿ. ಜೊತೆಗೆ ಸ್ವಲ್ಪ ಸ್ವಲ್ಪ ಸಮಯ ಕಣ್ಣುಗಳಿಗೆ ಆರಾಮ ನೀಡಿ. ಇದಕ್ಕಾಗಿ ಕಡಿಮೆ ಸಮಯದ ಕಣ್ಣುಗಳ ವ್ಯಾಯಾಮ ಮಾಡಬೇಕಾಗುವುದು. ಕಣ್ಣುಗಳು ಸ್ವಲ್ಪ ಸಮಯ ಬಂದ ಮಾಡಿ ಕುಳಿತುಕೊಳ್ಳಿ. ಕಣ್ಣನ್ನು ಮೇಲೆ ಕೆಳಗೆ , ಎಡ ಬಲಕ್ಕೆ ತಿರುಗಿಸಿ. ಈ ತರಹದ ವ್ಯಾಯಾಮ ಮಾಡುವುದರಿಂದ ಕಣ್ಣುಗಳು ಹಾಳಾಗುವುದಿಲ್ಲ. 
 
3. ಜಾಗಿಂಗ್: ಮಧ್ಯಾಹ್ನ ಊಟದ ನಂತರ ನಿಮ್ಮ ಆವರಣದಲ್ಲಿ ಜಾಗಿಂಗ್‌ ಮಾಡಿ. ಈ ಜಾಗಿಂಗ್‌ ಐದರಿಂದ ಹತ್ತು ನಿಮಿಷ ಮಾಡಿ. ಇದರಿಂದ ನಿಮ್ಮ ಎನರ್ಜಿ ಲೇವಲ್‌ ಹೆಚ್ಚುತ್ತದೆ ಮತ್ತು ಒತ್ತಡ ಕಡಿಮೆ ಆಗುತ್ತದೆ. ಈ ರೀತಿ ಮಾಡುವುದರಿಂದ ನೀವು ಆಕ್ಟಿವ್ ಆಗುತ್ತಿರಿ. 
 
4. ಕುತ್ತಿಗೆ , ಭುಜದ ಮತ್ತು ಮಣಿಕಟ್ಟಿಗಾಗಿ: ಈ ವ್ಯಾಯಾಮ ಖುರ್ಚಿ ಮೇಲೆ ಕುಳಿತುಕೊಂಡು ಕೂಡ ಮಾಡಬಹುದಾಗಿದೆ. ನಿಮ್ಮ ಕುತ್ತಿಗೆ ಮುಂದೆ ಹಿಂದೆ , ಎಡ ಬಲ ಮತ್ತು ಗೋಲಾಕಾರದಲ್ಲಿ ತಿರುಗಿಸಿ. ಇದರಿಂದ ನಿಮ್ಮ ಒತ್ತಡ ಕಡಿಮೆ ಆಗುತ್ತದೆ ಮತ್ತು ಇದು ದಿನದ ಯಾವುದೇ ಸಮಯದಲ್ಲಿ ಮಾಡಬಹುದಾಗಿದೆ. ಭುಜವನ್ನು 10 ಬಾರಿ ತಿರುಗಿಸಿ. ಇದು ಮಾಂಸ ಖಂಡಗಳಿಗೆ ಶಕ್ತಿ ನೀಡುತ್ತದೆ ಮತ್ತು ನರಗಳ ಸೆಳೆತ ಕಡಿಮೆ ಆಗುತ್ತದೆ. 
 
5. ಪಾದಗಳಿಗಾಗಿ: ನಿಮ್ಮ ಕೈ ಕ್ಲಾಕ್‌‌ವೈಜ್ ಮತ್ತು ಆಂಟಿ ಕ್ಲಾಕ್‌ವೈಜ್‌ ತಿರುಗಿಸಿ. ಇದೇ ರೀತಿ ನಿಮ್ಮ ಪಾದಗಳು ಕೂಡ 10 ಬಾರಿ ಕ್ಲಾಕ್‌ವೈಜ್ ಮತ್ತು 10 ಬಾರಿ ಆಂಟಿಕ್ಲಾಕ್‌ವೈಜ್‌ ರೋಲ್‌ ಮಾಡಿ. ಇದರಿಂದ ರಕ್ತ ಪರಿಚಲನೆ ಸುಗಮವಾಗುವುದು ಮತ್ತು ನಿಮ್ಮ ಪಾದಗಳು ಜೊಮು ಹಿಡಿಯುವುದು ನಿಲ್ಲುತ್ತದೆ . 
 

ವೆಬ್ದುನಿಯಾವನ್ನು ಓದಿ