ಎಬೋಲಾ ರೋಗಕ್ಕೆ ಔಷಧ ಪತ್ತೆ

ಶನಿವಾರ, 24 ಡಿಸೆಂಬರ್ 2016 (06:53 IST)
ಲಂಡನ್: ಎಬೋಲಾ ಮಾರಕ ರೋಗ. ಹಂದಿ ಜ್ವರದಂತೆ ಇದು ವಿಶ್ವದಾದ್ಯಂತ ತೀವ್ರವಾಗಿ ಹರಡುತ್ತಿರುವ ವೈರಾಣು ರೋಗ. ಇದೀಗ ಇದಕ್ಕೆ ಔಷಧ ಕಂಡುಕೊಳ್ಳುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನ ಯಶಸ್ವಿಯಾಗಿದೆ.


ಇದಕ್ಕೆ ಒಂದು ಪ್ರತಿರೋಧಕ ಚುಚ್ಚುಮದ್ದನ್ನು ಯಶಸ್ವಿಯಾಗಿ ಪತ್ತೆ ಮಾಡಲಾಗಿದ್ದು, ಇದರಿಂದ ಜೀವಕ್ಕೆ ಮಾರಕವಾಗಬಲ್ಲ ಎಬೋಲಾ ವೈರಾಣು ಹರಡದಂತೆ ತಡೆಯಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದಕ್ಕೆ ಔಷಧ ಕಂಡುಕೊಳ್ಳಲು ಸ್ವಲ್ಪ ನಿಧಾನವಾದ್ದರಿಂದ ಹಲವರು ಪ್ರಾಣ ಕಳೆದುಕೊಂಡರು. ಆದರೆ ಮುಂದಿನ ಬಾರಿ ಎಬೋಲಾ ತೀವ್ರವಾಗುವಾಗ ಅದು ಹರಡದಂತೆ ತಡೆಯಬಹುದು ಎಂದು ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈ ಪ್ರತಿರೋಧಕ ಔಷಧದ ಹೆಸರು ಆರ್ ವಿಎಸ್ ವಿ-ಝೆಡ್ಇಬಿಒವಿ ಎಂದಾಗಿದೆ. ಸಾವಿರಾರು ಮಂದಿಯ ಮೇಲೆ ಸಂಶೋಧಕರು ಇದರ ಸಾಧಕ ಬಾಧಕಗಳ ಕುರಿತಾಗಿ ಸಂಶೋಧನೆ ನಡೆಸಿದ್ದಾರೆ. ಅಂತೂ ಇನ್ನೊಂದು ಮಾರಕ ರೋಗಕ್ಕೆ ವೈದ್ಯ ವಿಜ್ಞಾನ ಲೋಕ ಮದ್ದು ಕಂಡುಕೊಂಡಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ