ರಜಾ ದಿನ ರೊಮ್ಯಾನ್ಸ್ ಮಾಡಲು ಟಿಪ್ಸ್!

ಭಾನುವಾರ, 29 ಜುಲೈ 2018 (09:13 IST)
ಬೆಂಗಳೂರು: ರಜಾ ದಿನ ಮನೆಯಲ್ಲೇ ಇದ್ದರೆ ಬೋರಾಗುವುದು ಸಹಜ. ಹೇಗಿದ್ದರೂ ಬಿಡುವಿದೆಯಲ್ಲಾ? ರೊಮ್ಯಾಂಟಿಕ್ ಆಗಿ ಕಾಲ ಕಳೆಯಲು ಇಲ್ಲಿದೆ ಕೆಲವು ಟಿಪ್ಸ್!

ಕ್ಲೀನಿಂಗ್
ರಜಾ ದಿನ ವಾರದ ಇಡೀ ಬಟ್ಟೆಯನ್ನು ಕ್ಲೀನ್ ಮಾಡುವ ಅಭ್ಯಾಸವಿದ್ದರೆ ಬಚ್ಚಲು ಮನೆಯೇ ರೊಮ್ಯಾಂಟಿಕ್ ತಾಣವಾಗಬಹುದು. ಇಬ್ಬರೂ ಪರಸ್ಪರ ನೀರಾಟವಾಡಿಕೊಂಡು, ನಡು ನಡುವೆ ರೊಮ್ಯಾನ್ಸ್ ಮಾಡುತ್ತಾ ಕ್ಲೀನಿಂಗ್ ಕೆಲಸ ಮಾಡಿ!

ಅಡುಗೆ ಮಾಡಿ
ಜತೆಯಾಗಿ ಅಡುಗೆ ಮಾಡುವುದರಿಂದ ರೊಮ್ಯಾಂಟಿಕ್ ಮೂಡ್ ಹೆಚ್ಚುತ್ತದೆ! ಪರಸ್ಪರ ಕಾಲೆಳೆದುಕೊಳ್ಳುತ್ತಾ ಅಡುಗೆ ಮಾಡುತ್ತಿದ್ದರೆ ಉತ್ತಮ ಮೂಡ್ ಗೆ ಬರುತ್ತೀರಿ.

ಸಿನಿಮಾ ನೋಡಿ
ಇಬ್ಬರೂ ಜತೆಯಾಗಿ ಕುಳಿತು ರೊಮ್ಯಾಂಟಿಕ್ ಸಿನಿಮಾವೊಂದನ್ನು ನೋಡಿ. ಇದರಿಂದ ಮೂಡ್ ಕೂಡಾ ಬದಲಾಗುತ್ತದೆ.

ಟೀಕೆಗಳು ಬೇಡ
ರಜಾ ದಿನಗಳಂದು ಸಂಗಾತಿ ಜತೆ ರೊಮ್ಯಾನ್ಸ್ ಮಾಡಬೇಕೆಂಬ ಆಸೆಯಿದ್ದರೆ ಯಾವುದೇ ಕಾರಣಕ್ಕೂ ಆತ/ಆಕೆಯನ್ನು ಅವರ ಕೆಲಸಗಳನ್ನು ವಿಮರ್ಶಿಸಲು ಅಥವಾ ಟೀಕೆ ಮಾಡಲು ಹೋಗಬೇಡಿ. ಇದರಿಂದ ನೆಗೆಟಿವ್ ವಾತಾವರಣ ಸೃಷ್ಟಿಯಾಗುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ