ತರಕಾರಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ
ಶನಿವಾರ, 27 ಫೆಬ್ರವರಿ 2021 (06:41 IST)
ಬೆಂಗಳೂರು : ಅಡುಗೆಗೆ ಬಳಸುವ ಕೆಲವು ಪದಾರ್ಥಗಳು ಸಿಪ್ಪೆ ಸುಲಿದು ಬಳಸಬೇಕಾಗುತ್ತದೆ. ಆದರೆ ಕೆಲವೊಂದು ಪದಾರ್ಥಗಳ ಸಿಪ್ಪೆ ಸುಲಿಯುವುದು ಬಹಳ ಕಷ್ಟವಾಗುತ್ತದೆ. ಆ ವೇಳೆ ಈ ಟಿಪ್ಸ್ ಫಾಲೋ ಮಾಡಿ.
ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಕಷ್ಟವಾದಾಗ ಅದನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಬಳಿಕ ಸಿಪ್ಪೆ ತೆಗೆಯುವಾಗ ಸುಲಭವಾಗಿ ಬರುತ್ತದೆ. ಬದನೆಕಾಯಿಯನ್ನು ಬೆಂಕಿಯಲ್ಲಿಟ್ಟು ಸುಡುವಾಗ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸುರಿದರೆ ಅದರ ಸಿಪ್ಪೆ ಸುಲಭವಾಗಿ ತೆಗೆಯಬಹುದು.