ಕೂದಲಿನ ಪೋಷಣೆಗೆ ಈ ಟಿಪ್ಸ್ ಫಾಲೋ ಮಾಡಿ

ಬುಧವಾರ, 17 ಜೂನ್ 2020 (09:10 IST)
ಬೆಂಗಳೂರು : ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದಕಾರಣ ಕೂದಲಿನ ಪೋಷಣೆ ಕೂಡ ಅತಿ ಅಗತ್ಯ. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.

*ದಾಸವಾಳ ಎಲೆ , ಭೃಂಗರಾಜ ಸೊಪ್ಪು, ಒಂದೆಲಗ ಸೊಪ್ಪನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

*ಕರಿಬೇವಿ ಸೊಪ್ಪನ್ನು ರುಬ್ಬಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಇದನ್ನು ಸ್ವಲ್ಪ ಬಿಸಿ ಮಾಡಿಕೊಂಡು ಕೂದಲು ಬುಡಕ್ಕೆ ಹಚ್ಚಿಕೊಳ್ಳಿ.

*ಕೊಬ್ಬರಿ ಎಣ್ಣೆಗೆ ಸಮಪ್ರಮಾಣದಲ್ಲಿ ನಿಂಬೆರಸ ಬೆರೆಸಿ ತಲೆಗೂದಲಿಗೆ ಕೈಬೆರಳ ತುದಿಯಿಂದ ಉಜ್ಜಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

*ಸ್ನಾನ ಮಾಡುವಾಗ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಕುದಿಸಿ ಅದರಿಂದ ತಲೆ ಸ್ನಾನ ಮಾಡಿದಲ್ಲಿ ಕೂದಲುದುರುವಿಕೆ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ