ಆರೋಗ್ಯಕರ ರಾಗಿ ಮಾಲ್ಟ್ ಹೀಗೆ ತಯಾರಿಸಿ

ಮಂಗಳವಾರ, 16 ಜೂನ್ 2020 (08:29 IST)
ಬೆಂಗಳೂರು : ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದಕಾರಣ ಮಕ್ಕಳಿಗೆ ರಾಗಿ ಮಾಲ್ಟ್ ತಯಾರಿಸಿ ಕುಡಿದರೆ ಅವರು ಆರೋಗ್ಯವಾಗಿರುತ್ತಾರೆ.

ಬೇಕಾಗುವ ಸಾಮಾಗ್ರಿಗಳು: ½ ಕಪ್ ರಾಗಿ ಹಿಟ್ಟು, ½ ಕಪ್ ಹಾಲು, ಬೆಲ್ಲ, ಏಲಕ್ಕಿ ಪುಡಿ,
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟಿಗೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಗ್ಯಾಸ್ ಮೇಲೆ 1 ಕಪ್ ನೀರು ಕುದಿಸಿ ಅದಕ್ಕೆ ಮಿಕ್ಸ್ ಮಾಡಿದ ರಾಗಿ ಹಿಟ್ಟನ್ನು ಹಾಕಿ ತಳ ಹಿಡಿಯದಂತೆ, ಗಂಟು ಹಿಡಿಯದಂತೆ ಸುಮಾರು 9 ನಿಮಿಷ ಬೇಯಿಸಿ.


ಬಳಿಕ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಹಾಲು ಮಿಕ್ಸ್ ಮಾಡಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿದರೆ ರಾಗಿ ಮಾಲ್ಟ್ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ