ತುಂಬಾ ಹಸಿವಾಗುವ ಹಾಗೂ ಹಸಿವೆಯೇ ಆಗುವುದಿಲ್ಲ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ
ಬುಧವಾರ, 24 ಜೂನ್ 2020 (08:50 IST)
ಬೆಂಗಳೂರು : ಕೆಲವರಿಗೆ ತುಂಬಾ ಹಸಿವಾಗುತ್ತದೆ. ಇದರಿಂದ ಅವರು ತುಂಬಾ ಆಹಾರ ಸೇವಿಸುವುದರಿಂದ ದಪ್ಪವಾಗುತ್ತಾರೆ. ಇನ್ನೂ ಕೆಲವರಿಗೆ ಹಸಿವೆಯೇ ಆಗುವುದಿಲ್ಲ. ಇದರಿಂದ ಅವರಿಗೆ ಆಹಾರ ಸೇರದೆ ತೆಳ್ಳಗೆ ಆಗುತ್ತಾರೆ. ಅಂತವರು ಈ ಟಿಪ್ಸ್ ನ್ನು ಫಾಲೋ ಮಾಡಿ.
ಓಂಕಾಳಿನಲ್ಲಿ ಫೈಬರ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಸೆಪ್ಟಿಕ್, ಪ್ರೋಟೀನ್ , ಕ್ಯಾಲ್ಸಿಯಂ, ಐರಾನ್, ಮುಂತಾದ ಪೌಷ್ಟಿಕಾಂಶಗಳಿವೆ. ಇದು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಹಸಿವಾಗುವಂತೆ ಮಾಡುತ್ತದೆ. ಆದಕಾರಣ ಹಸಿವಿಲ್ಲ ಎಂದು ಬಯಸುವವರು ಪ್ರತಿದಿನ ಓಂಕಾಳನ್ನು ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ.
ಹಾಗೇ ತುಂಬಾ ಹಸಿವಾಗುವವರು ಅದನ್ನು ಕಡಿಮೆ ಮಾಡಿಕೊಳ್ಳಲು ಶೇಂಗಾವನ್ನು ಸೇವಿಸಿ. ಶೇಂಗಾದಲ್ಲಿರುವ ಪ್ರೋಟಿನ್ ಮತ್ತು ನಾರಿನಾಂಶ ನಿಮ್ಮ ಹೊಟ್ಟೆ ತುಂಬಿಸಿದಂತೆ ಮಾಡುವುದರಿಂದ ತುಂಬಾ ಹಸಿವಾಗುವುದನ್ನು ತಡೆಯುತ್ತದೆ. ತೂಕ ಕಡಿಮೆಯಾಗುತ್ತದೆ.