ಟವೆಲ್ ನಲ್ಲಿ ಅಂಟಿಕೊಂಡ ಕಲೆಯನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಬುಧವಾರ, 10 ಮಾರ್ಚ್ 2021 (07:07 IST)
ಬೆಂಗಳೂರು : ಕೂದಲು ಬಿಳಿಯಾಗುವುದರಿಂದ ಕೆಲವರು ಕೂದಲಿಗೆ ಕಲರ್ ಹಾಕುತ್ತಾರೆ. ಇದು ಕೆಲವೊಮ್ಮೆ ಟವೆಲ್ ಗೆ ಅಂಟಿಕೊಳ್ಳುತ್ತದೆ. ಈ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
ಸೋಪ್ ಬಳಸಿ ವಾಶ್ ಮಾಡಿದರೆ ಇದು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ನಿಂಬೆ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಟವೆಲ್ ನಲ್ಲಿ ತಗುಲಿದ ಕಲರ್ ನ್ನು ಸುಲಭವಾಗಿ ತೆಗೆಯಬಹುದು. 2 ಚಮಚ ಹೈಡ್ರೋಜನ್ ಪೆರಾಕ್ಸೈಡ್, ನಿಂಬೆ ಮತ್ತು ಉಪ್ಪು ಸೇರಿಸಿ ಮಿಶ್ರಣ ತಯಾರಿಸಿ ಅದನ್ನು ಕಲೆಯ ಮೇಲೆ ಹಾಕಿ ಬ್ರೆಶ್ ಸಹಾಯದಿಂದ 2 ಬಾರಿ ಉಜ್ಜಿ. ಇದರಿಂದ ಕಲೆ ಸುಲಭವಾಗಿ ಹೋಗುತ್ತದೆ. ಬಳಿಕ ಶುದ್ಧ ನೀರಿನಿಂದ ವಾಶ್ ಮಾಡಿ.