ಸಣ್ಣಗಿದ್ದವರು ದಪ್ಪಗಾಗಲು ಈ ಟಿಪ್ಸ್ ಫಾಲೋ ಮಾಡಿ ನೋಡಿ

ಗುರುವಾರ, 29 ನವೆಂಬರ್ 2018 (14:34 IST)
ಬೆಂಗಳೂರು : ಕೆಲವರಿಗೆ ತಾವು ತುಂಬಾ ಸಣ್ಣಗೆ ಆಗುತ್ತಿದ್ದೇವೆ ಎಂದು ಯಾವಾಗಲೂ ಕೊರಗುತ್ತಿರುತ್ತಾರೆ, ಅಂತವರು ಆರೋಗ್ಯವಾಗಿ ದಪ್ಪವಾಗಲು ಇಲ್ಲಿದೆ ನೋಡಿ ಮನೆಮದ್ದು.


ಒಂದು ಹಿಡಿ ಕಡಲೆಬೀಜ ತೆಗೆದುಕೊಂಡು ರಾತ್ರಿ ನೆನೆಹಾಕಿ ಬೆಳಿಗ್ಗೆ ತಿನ್ನಬೇಕು. ಇದನ್ನು ಪ್ರತಿದಿನ ಮಾಡಿದ್ರೆ ಒಂದು ತಿಂಗಳಲ್ಲಿ ದೇಹದ ತೂಕ ಹೆಚ್ಚಾಗುತ್ತದೆ. ತೆಂಗಿನಕಾಯಿ ಅರ್ಧ ಹೋಳು ಹಾಗೂ ಖರ್ಜೂರವನ್ನು ಪ್ರತಿದಿನ ತಿನ್ನಬೇಕು.


ಬಾರ್ಲಿ ಪಾಯಸ ತಿಂದರೆ ಬೇಗ ದಪ್ಪವಾಗುತ್ತಾರೆ. ಇದನ್ನು ಮಾಡುವ ವಿಧಾನ:

ಬಾರ್ಲಿಯನ್ನು 2 ಚಮಚ ತುಪ್ಪ ಹಾಕಿ ಚೆನ್ನಾಗಿ ಪ್ರೈ ಮಾಡಿ. ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಅದಕ್ಕೆ 250ml ಹಾಲು ಹಾಗೂ ಸಕ್ಕರೆ ಬೇಕಾಗುವಷ್ಟು ಹಾಕಿ ಮಿಕ್ಸ್ ಮಾಡಿ. ನಂತರ ಒಣ ದ್ರಾಕ್ಷಿ, 3 ಬಾದಾಮಿ 5-6 ಗೋಡಂಬಿ, ಹಾಗೂ 2 ಖರ್ಜುರ ಇವಿಷ್ಟನ್ನು ತುಪ್ಪದಲ್ಲಿ ಹುರಿದು ಕುದಿಸಿದ ಬಾರ್ಲಿ ಮಿಶ್ರಣಕ್ಕೆ  ಹಾಕಿ. ನಂತರ ತಿನ್ನುವಾಗ 2 ಚಮಚ ತುಪ್ಪ ಸೇರಿಸಿಕೊಂಡು ತಿನ್ನಿ. ಹೀಗೆ ಪ್ರತಿದಿನ ಸಂಜೆ  ತಿನ್ನಿ. ಇದನ್ನು ತಿಂದರೆ 1 ತಿಂಗಳೊಳಗೆ ಆರೋಗ್ಯವಾಗಿ ದಪ್ಪವಾಗುತ್ತೀರಾ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ