ಬೆಂಗಳೂರು : ಕೆಲವರು ಮನೆಯಲ್ಲಿಯೇ ಹಾಲಿನ ಕೆನೆಯಿಂದ ತುಪ್ಪವನ್ನು ತಯಾರಿಸುತ್ತದೆ. ಅಂತವರಿಗೆ ಹಾಲಿನಿಂದ ರೊಟ್ಟಿಯಂತೆ ದಪ್ಪವಾಗಿರುವ ಕೆನೆ ಬೇಕೆಂದರೆ ಹೀಗೆ ಮಾಡಿ.
ಮೊದಲು ಹಾಲಿನ ಪಾತ್ರೆಯನ್ನು ನೀರಿನಿಂದ ತೊಳೆದು ಬಳಿಕ ಅದಕ್ಕೆ 1 ½ ಲೀಟರ್ ಹಾಲನ್ನು ಹಾಕಿ ಗ್ಯಾಸ್ ನ್ನು ಹೈಪ್ಲೇಮ್ ನಲ್ಲಿಟ್ಟು ಕಾಯಿಸಿ. ಅದು ಕುದಿಯುತ್ತಿರುವಾಗ ಗ್ಯಾಸ್ ಸಣ್ಣ ಉರಿಯಲ್ಲಿಟ್ಟು 5 ನಿಮಿಷ ಕುದಿಸಿ. ಬಳಿಕ ಅದನ್ನು ಒಂದು ಕಡೆ ಇಟ್ಟು ಮುಚ್ಚಳ ಅರ್ಧ ಮುಚ್ಚಿಡಿ. ಬಳಿಕ 1 ½ ಗಂಟೆ ಬಳಿಕ ಅದನ್ನು ಫ್ರಿಜ್ ನಲ್ಲಿಡಿ. ನಂತರ 2 ½ ಗಂಟೆ ಬಳಿಕ ಅದನ್ನು ಹೊರತೆಗೆದು ಕೆನೆ ತೆಗೆದಾಗ ಅದು ರೊಟ್ಟಿಯಂತೆ ದಪ್ಪವಾಗಿರುತ್ತದೆ.