ಆರೋಗ್ಯವಾಗಿರಲು ಸ್ನೇಹಿತರ ಜತೆ ಪಬ್ ನಲ್ಲಿ ಕುಡಿದು ಕುಣಿಯಿರಿ!

ಸೋಮವಾರ, 9 ಜನವರಿ 2017 (13:30 IST)
ಬೆಂಗಳೂರು: ಆರೋಗ್ಯವಾಗಿರಲು ಏನು ಮಾಡಬೇಕು. ಸಿಂಪಲ್. ಸ್ನೆಹಿತರ ಜತೆ ಪಬ್ ಗೆ ಹೋಗಿ ಕುಡಿದು ಕುಣಿದು ಮಸ್ತಿ ಮಾಡಿದೆ ಎಂದಿದೆ ನೂತನ ಸಂಶೋಧನೆ. ಆಕ್ಸ್ ಫರ್ಡ್ ವಿಜ್ಞಾನಿಗಳು ಇಂತಹದ್ದೊಂದು ಘನಂದಾರಿ ಸತ್ಯ ಕಂಡುಕೊಂಡಿದ್ದಾರೆ.


ಲೋಕಲ್ ಪಬ್ ಗಳಿಗೆ ಆಗಾಗ ಸ್ನೇಹಿತರ ಜತೆ ಹೋಗುತ್ತಾ ಇರಿ ಎಂದಿದ್ದಾರೆ ಸಂಶೋಧಕರು. ಒಬ್ಬ ವ್ಯಕ್ತಿಯ ಸಾಮಾಜಿಕ ಸಂಬಂಧದ ಅನುಭವ ಉತ್ತಮ ಮಾಡುವುದು ಅವರು ಉಪಯೋಗಿಸುವ ಮದ್ಯಪಾನದ ಪ್ರಮಾಣವೋ, ಅವರು ಎಲ್ಲಿ ಸೇರುತ್ತಾರೆ ಎನ್ನುವುದರ ಮೇಲೆಯೋ ಎಂದು ಸಂಶೋಧಕರು ಅಧ್ಯಯನ ನಡೆಸಿದರು.

ಆಗ ಲೋಕಲ್ ಪಬ್ ಗಳಿಗೆ ಹೋಗುವ ಜನರು ಹೆಚ್ಚು ಕ್ರಿಯಾತ್ಮಕವಾಗಿ, ಆರೋಗ್ಯವಾಗಿರುತ್ತಾರೆಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸ್ಥಳೀಯ ಪಬ್ ಗಳಲ್ಲಿ ಸಣ್ಣ ಜನರ ಗುಂಪಿನೊಂದಿಗೆ ಸಂವಹಿಸುತ್ತಾರೆ. ಇವರಿಗೆ ಸಂವಹನ ಅವಕಾಶ ಹೆಚ್ಚು ಸಿಗುವುದರಿಂದ ದೊಡ್ಡ ಗುಂಪಿನ ಎದುರು ಮಾತಾಡಬಲ್ಲರು. ಆದರೆ ದೊಡ್ಡ ನಗರಗಳ ಬಾರ್ ನಲ್ಲಿ ಜನಸಂಖ್ಯೆ ಹೆಚ್ಚಿರುವಲ್ಲಿ ಗುಂಪು ಸೇರುವವರಿಗೆ ಮಾತನಾಡಲು ಅವಕಾಶ ಸಿಗುವುದು ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

ಹೀಗಾಗಿ ಸ್ಥಳೀಯ ಪಬ್ ಗಳಿಗೆ ತೆರಳಿ ಕುಡಿದು ಮಸ್ತಿ ಮಾಡುತ್ತಿದ್ದರೆ, ನಿಮ್ಮ ಆತ್ಮ ವಿಶ್ವಾಸವೂ ಹೆಚ್ಚುತ್ತದೆ, ಆರೋಗ್ಯವೂ ವೃದ್ಧಿಸುತ್ತದೆ ಎನ್ನುವುದು ಅಧ್ಯಯನಕಾರರ ಮಹಾ ಸಂಶೋಧನೆಯ ಸಾರಾಂಶ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ