ಚಾಕಲೇಟ್ ಪ್ರಿಯರಿಗೊಂದು ಸಂತಸದ ಸುದ್ದಿ

ಗುರುವಾರ, 25 ಮೇ 2017 (11:39 IST)
ಬೆಂಗಳೂರು: ಚಾಕಲೇಟ್ ತಿನ್ನಲು ಎಲ್ಲರಿಗೂ ಇಷ್ಟ. ಚಾಕಲೇಟ್ ಸೇವಿಸುವವರಿಗೆ ಹೊಸ ಅಧ್ಯಯನ ವರದಿಯೊಂದು ಸಂತಸದ ಸುದ್ದಿ ನೀಡಿದೆ. ಅದೇನದು? ಈ ಸುದ್ದಿ ಓದಿ.

 
ನಿಯಮಿತವಾಗಿ ಚಾಕಲೇಟ್ ತಿನ್ನುತ್ತಿದ್ದರೆ, ಅನಿಯಮಿತವಾದ ಹೃದಯ ಬಡಿತದ ತೊಂದರೆಯನ್ನು ತಪ್ಪಿಸಬಹುದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಅನಿಯಮಿತ ಹೃದಯ ಬಡಿತ ಎನ್ನುವುದು ವಿಶ್ವದಾದ್ಯಂತ ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ ಅಧ್ಯಯನಕಾರರು ಇಂತಹದ್ದೊಂದು ಸತ್ಯ ಕಂಡುಕೊಂಡಿದ್ದಾರೆ.

ಅಮೆರಿಕಾದ ಅಧ್ಯಯನಕಾರರು ಈ ಸಂಶೋಧನೆ ನಡೆಸಿದ್ದಾರೆ. ಚಾಕಲೇಟ್ ಅದರಲ್ಲೂ ಕಪ್ಪು ಬಣ್ಣದ ಚಾಕಲೇಟ್ ಗಳನ್ನು ಹೆಚ್ಚು ತಿಂದಷ್ಟೂ ಹೃದಯದ ಆರೋಗ್ಯಕ್ಕೆ ಉತ್ತಮ ಎಂದಿದ್ದಾರೆ. ಅನಿಯಮಿತ ಹೃದಯ ಬಡಿತಕ್ಕೆ ಸದ್ಯಕ್ಕೆ ವಿಶ್ವದಲ್ಲಿ ಯಾವುದೇ ಸೂಕ್ತ ಚಿಕಿತ್ಸೆ ಪತ್ತೆಯಾಗಿಲ್ಲ.

ಹೀಗಾಗಿ 50 ರಿಂದ 60 ವರ್ಷ ವಯಸ್ಸಿನ ಸಾವಿರಾರು ಮಂದಿಯ ಮೇಲೆ ಸಂಶೋಧನೆ ನಡೆಸಿ ಅಧ್ಯಯನಕಾರರು ಈ ಸತ್ಯ ಕಂಡುಕೊಂಡಿದ್ದಾರೆ. ಹಾಗಾಗಿ ಚಾಕಲೇಟ್ ತಿನ್ನುವ ನಿಮ್ಮ ಖಯಾಲಿಗೆ ಬ್ರೇಕ್ ಹಾಕಬೇಕಿಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ