ಈ ಹಣ್ಣು ಸೇವಿಸಿ ಕೊಬ್ಬು ಕರಗಿಸಿ

ಗುರುವಾರ, 9 ಮಾರ್ಚ್ 2017 (10:17 IST)
ಬೆಂಗಳೂರು: ದೇಹದಲ್ಲಿ ಕೊಲೆಸ್ಟ್ರಾಲ್ ತುಂಬುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಕೂಡಲೇ ನಿಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ ಸೇವಿಸಿ. ಅವು ಯಾವುವು?

 
ಸೀಬೆಕಾಯಿ

ಸೀಬೆಕಾಯಿ ಹಿತ್ತಲ ಹಣ್ಣು ಎಂದೇ ಪ್ರಸಿದ್ಧ.  ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಮಲಬದ್ಧತೆಯಾಗದಂತೆಯೂ ತಡೆಯುತ್ತದೆ. ಇದು ದೇಹದಲ್ಲಿ ಮೆಟೋಬಾಲಿಕ್ ರೇಟ್ ಕ್ರಿಯಾತ್ಮಕವಾಗಿಸುವುದರಿಂದ, ದೇಹದ ತೂಕ ಕಡಿಮೆ ಮಾಡಲು ಸಹಕಾರಿ.

ಕಲ್ಲಂಗಡಿ ಹಣ್ಣು

ಬೇಸಿಗೆಯಲ್ಲಿ ನಾವೆಲ್ಲಾ ಇಷ್ಟಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ ಹಣ್ಣು. ಇದು ಪ್ರತೀ 100 ಗ್ರಾಂ ಗೆ ಕೇವಲ 30 ಗ್ರಾಂ ಕ್ಯಾಲೊರಿ ಒದಗಿಸುತ್ತದೆ. ಇದರಲ್ಲಿ ಅಮಿನೊ ಆಸಿಡ್ ಹೆಚ್ಚಿರುತ್ತದೆ, ಇದು ತೂಕ ಇಳಿಸುವ ಕೆಲಸ ಮಾಡುತ್ತದೆ.

ಕಿತ್ತಳೆ ಹಣ್ಣು

ಕಿತ್ತಳೆ ಅಥವಾ ಆರೆಂಜ್ ಹಣ್ಣು ಕಡಿಮೆ ಕ್ಯಾಲೊರಿ ಇರುವ ಹಣ್ಣು. ಇದು ಪ್ರತೀ 100 ಗ್ರಾಂಗೆ 47 ಗ್ರಾಂ ಕ್ಯಾಲೊರಿ ಒದಗಿಸುತ್ತದೆ.  ಇದು ಶರೀರಕ್ಕೆ ಅಗತ್ಯವಿಲ್ಲದ ಕ್ಯಾಲೊರಿ ನಾಶ ಮಾಡಲೂ ಸಹಕಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ