ಹೆರಿಗೆಯ ನಂತರ ಲೈಂಗಿಕ ಕ್ರಿಯೆ ನಡೆಸಿದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಗೊತ್ತಾ...?

ಬುಧವಾರ, 10 ಜನವರಿ 2018 (07:34 IST)
ಬೆಂಗಳೂರು : ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಅವರಿಗೆ ಹೆರಿಗೆ ನಂತರ ಸಾಕಷ್ಟು ವಿಶ್ರಾಂತಿ ಬೇಕು. ಹೆರಿಗೆ ನಂತರ ಅವರಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ಈ ಮಧ್ಯ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ  ಎಂಬ ಪ್ರಶ್ನೆ ಎಲ್ಲರನೂ ಕಾಡುತ್ತಿರುತ್ತದೆ.

 

ಇದಕ್ಕೆ ತಜ್ಞರ ಉತ್ತರವೆನೆಂದರೆ ಹೆರಿಗೆ ನಂತರ 4-6 ತಿಂಗಳವರೆಗೆ ಮಹಿಳೆ ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದಕ್ಕಿಂತ ಮೊದಲು ದೈಹಿಕ ಸಂಬಂಧ ಬೆಳೆಸಿದರೆ ಮಹಿಳೆ ಮತ್ತೆ ಗರ್ಭ ಧರಿಸುವ ಸಂಭವ ಹೆಚ್ಚಿರುತ್ತದೆ. ಒಂದು ವೇಳೆ ಮಹಿಳೆ ಮತ್ತೆ ಗರ್ಭಿಣಿಯಾದಲ್ಲಿ ಅದು ಆಕೆಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ಹೆರಿಗೆಯ ನಂತರ 4-6 ತಿಂಗಳು ಶಾರೀರಿಕ ಸಂಬಂಧ ಬೆಳೆಸದೆ ವಿಶ್ರಾಂತಿ ಪಡೆಯುವುದು  ಉತ್ತಮವೆಂದು ತಜ್ಞರು ಹೇಳಿದ್ದಾರೆ.

 
ಕೆಲ ಮಹಿಳೆಯರಿಗೆ ಹೆರಿಗೆ ನಂತರ ರಕ್ತಸ್ರಾವ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರಕ್ತಸ್ರಾವ ಸಂಪೂರ್ಣವಾಗಿ ನಿಲ್ಲುವವರೆಗೂ ಸಂಬಂಧ ಬೆಳೆಸಬಾರದು. ಹೊಲಿಗೆ ನೋವು ಸಾಮಾನ್ಯವಾಗಿ ಮಹಿಳೆಯನ್ನು ಕಾಡುತ್ತಿರುತ್ತದೆ. ವಿಶ್ರಾಂತಿ ಪಡೆಯದೆ ಸಂಬಂಧ ಬೆಳೆಸಿದರೆ ಹೊಲಿಗೆ ಬಿಚ್ಚಿಕೊಳ್ಳುವ ಅಪಾಯವಿರುತ್ತದೆ. ಹೆರಿಗೆ ನಂತರ ಗರ್ಭ ಕಂಠ ದೊಡ್ಡದಾಗುತ್ತದೆ. ಈ ವೇಳೆ ಸಂಬಂಧ ಬೆಳೆಸಿದರೆ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಇದೆ. ಮೂತ್ರದ ಸೋಂಕು ಕೂಡ ಕಾಣಿಸಬಹುದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ