ಮೈಗ್ರೇನ್ ನಿಂದ ನರಳುತ್ತಿರುವವರಿಗೆ ಇಲ್ಲಿದೆ ಮನೆಮದ್ದು

ಶುಕ್ರವಾರ, 5 ಜನವರಿ 2018 (12:53 IST)
ಬೆಂಗಳೂರು : ಮೈಗ್ರೇನ್ ಎನ್ನುವುದು ತಲೆನೋವಿನ ಒಂದು ಪ್ರಕಾರ. ಈ ತಲೆನೋವು ಇರುವವರು ದೈಹಿಕವಾಗಿ, ಮಾನಸಿಕವಾಗಿ ಆಯಾಸವಾದಾಗ ಅವರಲ್ಲಿ ಈ ತಲೆನೋವು  ಕಂಡುಬರುತ್ತೆ. ಹಾಗೆಂದು ಎಲ್ಲಾ ತಲೆನೋವು ಮೈಗ್ರೇನ್ ಅಲ್ಲ. ನೆಗಡಿ, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಒಬ್ಬ ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ಥಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ. ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಅದೇ ಮೈಗ್ರೇನ್.


ಇದನ್ನು ಒಂದು ಮನೆಮದ್ದಿನಿಂದ ತಕ್ಷಣ ನಿವಾರಿಸಬಹುದು. ಇದು ಯಾವುದೆ ತೊಂದರೆ, ಅಡ್ಡಪರಿಣಾಮಗಳಿಲ್ಲದೆ  5  ನಿಮಿಷದಲ್ಲಿ ತಲೆನೊವನ್ನು ವಾಸಿಮಾಡುತ್ತದೆ. ½ ನಿಂಬೆ ಹಣ್ಣಿನ ರಸ ಹಾಗು 2 ಚಮಚ ಸೈಂದವ ಲವಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಮೈಗ್ರೇನ್ ತಲೆನೋವು ತಕ್ಷಣ ವಾಸಿಯಾಗುತ್ತದೆ. ಸೈಂದವ ಲವಣವೆಂದರೆ ಹಿಮಾಲಯ ಸಮುದ್ರದ ಉಪ್ಪು. ಇದರಲ್ಲಿ 80 ಕ್ಕಿಂತ ಹೆಚ್ಚು ಖನಿಜಗಳು, ವಿದ್ಯತ್ ಛೇದಗಳು ಹಾಗು ನೈಸರ್ಗಿಕ ಅಂಶಗಳೊಂದಿಗೆ ಕೂಡಿದೆ. ಇದು ತುಂಬಾ ಉಪಯುಕ್ತವಾಗಿದ್ದು, ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಸ್ನಾಯು ಸೆಳೆತವನ್ನು ತಡೆಗಟ್ಟುತ್ತದೆ. ರಕ್ತದ ಒತ್ತಡವನ್ನು ಸ್ಥಿರಗೊಳಿಸುತ್ತದೆ. ನಿಂಬೆ ರಸದಲ್ಲಿ ಪೊಟ್ಯಾಶಿಯಂ ಹೆಚ್ಚಾಗಿದ್ದು ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಕಡಿಮೆಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ