ವೀಳ್ಯದೆಲೆ ಜಗಿದರೆ ಈ ರೋಗ ಬಾರದು!

Krishnaveni K

ಮಂಗಳವಾರ, 2 ಏಪ್ರಿಲ್ 2024 (11:49 IST)
WD
ಬೆಂಗಳೂರು: ವಿವಾಹಿತ ದಂಪತಿ ವೀಳ್ಯ ಹಾಕುವ ಸಂಪ್ರದಾಯ ನಮ್ಮಲ್ಲಿದೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ. ವೀಳ್ಯ ಜಗಿಯುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಹಿಂದೂ ಸಂಪ್ರದಾಯದಂತೆ ಶುಭ ಕಾರ್ಯಗಳಿಗೆ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಇದು ಸುಮ್ಮನೇ ಅಲಂಕಾರಿಕ ವಸ್ತು ಮಾತ್ರವಲ್ಲ. ವೀಳ್ಯದೆಲೆಯಲ್ಲಿ ಅಪಾರ ಔಷಧೀಯ ಗುಣವಿದೆ. ಇದಕ್ಕಾಗಿಯೇ ವೀಳ್ಯದೆಲೆ ಜಗಿಯಬೇಕು ಎಂಬುದನ್ನು ಸಂಪ್ರದಾಯವನ್ನಾಗಿ ಮಾಡಿರಬಹುದು.

ವೀಳ್ಯದೆಲೆಯನ್ನು ಪ್ರತಿನಿತ್ಯ ಜಗಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ನಮ್ಮ ಆಹಾರದಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ರಾತ್ರಿ ಹೊತ್ತು ವೀಳ್ಯ ಜಗಿದರೆ ಪರಿಹಾರ ಸಿಗಲಿದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುವ ಗುಣ ಹೊಂದಿದೆ.

ಅಷ್ಟೇ ಅಲ್ಲ, ವೀಳ್ಯದೆಲೆಯಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಗುಣವೂ ಇದೆ. ಅದೇ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ವೀಳ್ಯ ಜಗಿಯಲು ಹಿರಿಯರು ಹೇಳುತ್ತಾರೆ. ಆದರೆ ನೆನಪಿರಲಿ, ವೀಳ್ಯದ ಜೊತೆಗೆ ತಂಬಾಕು ಸೇವನೆ ಮಾಡಿದರೆ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ