ಬೆನ್ನು ನೋವಿನ ಪರಿಹಾರಕ್ಕೆ ಈ ಯೋಗ ಸೂಕ್ತ

Krishnaveni K

ಸೋಮವಾರ, 1 ಏಪ್ರಿಲ್ 2024 (12:18 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಬೆನ್ನು ನೋವು ಬಂದರೆ ಅದಕ್ಕೆ ಯೋಗದಲ್ಲಿ ಪರಿಹಾರವಿದೆ. ಅದು ಯಾವುದು ಎಂದು ನೋಡೋಣ.

ಬೆನ್ನು ನೋವು ಬಂದರೆ ಬೇಗನೇ ಅದು ವಾಸಿಯಾಗುವುದಿಲ್ಲ. ಆಯುರ್ವೇದ ಪದ್ಧತಿಯಲ್ಲಿ ಇದಕ್ಕೆ ಚಿಕಿತ್ಸೆಗಳಿರಬಹುದು. ಆದರೆ ಮತ್ತೆ ನಮ್ಮ ಕೆಲಸ ಕಾರ್ಯಗಳು ಬೆನ್ನು ನೋವು ಪದೇ ಪದೇ ಕಾಣಿಸಿಕೊಳ್ಳುವಂತೆ ಮಾಢಬಹುದು. ಹೀಗಾಗಿ ಇದಕ್ಕೆ ಯೋಗದಲ್ಲಿ ಒಂದು ಪರಿಹಾರ ಕಂಡುಕೊಳ್ಳಬಹುದು.

ಇದಕ್ಕೆ ಗೋ ಭಂಗಿಯ ಯೋಗಾಸನ ಮಾಡಬಹುದು. ಇದನ್ನು ಮಾಡುವ ವಿಧಾನ ಇಲ್ಲಿದೆ.

ಮೊದಲು ದನದ ಭಂಗಿಯಲ್ಲಿ ಮೊಣಕಾಲನ್ನು ನೆಲಕ್ಕೆ ತಾಗಿಸಿ, ಕೈ ನೆಲಕ್ಕೆ ಊರಿ ಇಡಿ.
ನಿಮ್ಮ ಮೊಣಕಾಲು ಮತ್ತು ಕೈಗಳ ಮೇಲೆ ಸಮಾನ ಭಾರ ಬೀಳುವಂತೆ ನೋಡಿಕೊಳ್ಳಿ.
ಉಸಿರನ್ನು ತೆಗೆದುಕೊಳ್ಳುತ್ತಾ ಮುಖ ಮೇಲೆತ್ತಿ ಹೊಟ್ಟೆಯ ಭಾಗವನ್ನು ನೆಲದ ಕಡೆಗೆ ಬಾಗಿಸಿ
ಈಗ ಉಸಿರು ಹೊರಬಿಡುತ್ತಾ ನಿಮ್ಮ ಗಲ್ಲವನ್ನು ಎದೆಗೆ ತಾಕುವಂತೆ ಕೆಳಗೆ ಮಾಡಿ. ಸೊಂಟವನ್ನು ಹಿಂದಕ್ಕೆ ಮತ್ತು ಬೆನ್ನಿನ ಭಾಗವನ್ನು ಮೇಲ್ಭಾಗಕ್ಕೆ ಬಾಗಿಸಿ.
ಇದೇ ರೀತಿ ನಿಧಾನವಾಗಿ 10 ರಿಂದ 15 ಬಾರಿ ಮಾಡುತ್ತಿರಿ.
ಇದೇ ರೀತಿ ಮಾಡುತ್ತಿದ್ದರೆ ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ