ಪ್ರತಿನಿತ್ಯ ಮೊಸರು ಸೇವಿಸುತ್ತಿದ್ದರೆ ಈ ಮ್ಯಾಜಿಕ್ ಆಗುತ್ತೆ!

ಗುರುವಾರ, 25 ಅಕ್ಟೋಬರ್ 2018 (09:16 IST)
ಬೆಂಗಳೂರು: ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಏನೆಂದು ನೋಡೋಣ.

ಜೀರ್ಣಕ್ರಿಯೆಗೆ
ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ ಅಸಿಡಿಟಿ, ಗ್ಯಾಸ್ಟಿಕ್ ಸಮಸ್ಯೆ ಇರುವವರು ಮೊಸರು ಸೇವಿಸಿದರೆ ಒಳ್ಳೆಯದು.

ರೋಗ ನಿರೋಧಕ
ಮೊಸರಿನಲ್ಲಿರುವ ಅಂಶಗಳು ನಮ್ಮ ದೇಹಕ್ಕೆ ಬೇಡದ ರೋಗಾಣುಗಳು ಬಾರದಂತೆ ತಡೆದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಚರ್ಮಕ್ಕೆ
ಮೊಸರಿನಲ್ಲಿ ತೇವಾಂಶ ಗುಣವಿದ್ದು, ಇದನ್ನು ಸೇವಿಸುವುದರಿಂದ ಚರ್ಮದ ತೇವಾಂಶ ಹೆಚ್ಚಿ ಸೌಂದರ್ಯ ವರ್ಧಿಸುತ್ತದೆ. ಹಲವು ಫೇಸ್ ಪ್ಯಾಕ್ ಗಳಲ್ಲಿ ಮೊಸರನ್ನು ಬಳಸಲಾಗುತ್ತದೆ.

ರಕ್ತದೊತ್ತಡ
ಕಡಿಮೆ ಕೊಬ್ಬಿನಂಶವಿರುವ ಮೊಸರು ಸೇವನೆಯಿಂದ ಶೇ.31 ರಷ್ಟು ರಕ್ತದೊತ್ತಡ ಸಮಸ್ಯೆ ಕಡಿಮೆಯಿರುತ್ತದೆ ಎಂದು ಹಲವು ಅಧ್ಯಯನ ವರದಿಗಳೇ ಹೇಳಿವೆ.

ಯೋನಿ ಸಮಸ್ಯೆ
ಮಹಿಳೆಯರಲ್ಲಿ ಯೋನಿ ಸಂಬಂಧೀ ಸೋಂಕು ಇತ್ಯಾದಿ ಸಮಸ್ಯೆಗಳಿಗೆ ಮೊಸರು ಪರಿಹಾರ ನೀಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ