ಮಲಬದ್ಧತೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ

ಗುರುವಾರ, 5 ಅಕ್ಟೋಬರ್ 2017 (08:42 IST)
ಬೆಂಗಳೂರು: ಮಲಬದ್ಧತೆಯೇ? ವೈದ್ಯರ ಬಳಿ ಹೋಗಿಯೂ ಪ್ರಯೋಜನವಾಗಿಲ್ಲವೇ? ಹಾಗಿದ್ದರೆ ಕೆಲವು ಮನೆ ಮದ್ದುಗಳಿಂದಲೇ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು.


ಪಪ್ಪಾಯ, ಕಿತ್ತಳೆ, ಬೀನ್ಸ್ ನಂತಹ ನಾರಿನಂಶವಿರುವ ಆಹಾರಗಳು ಮಲ ವಿಸರ್ಜನೆ ಸುಗಮವಾಗಲು ಸಹಕರಿಸುತ್ತದೆ. ಹಾಗಾಗಿ ಇದನ್ನು ಹೆಚ್ಚೆಚ್ಚು ಸೇವಿಸಿ. ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಹಾಕಿದ ಬಿಸಿ ನೀರು ಸೇವನೆ ಮಾಡುವುದೂ ಉತ್ತಮ.

ಪ್ರತಿನಿತ್ಯ ಸರಿಯಾದ ಸಮಯಕ್ಕೆ ಆಹಾರ ಸೇವಿಸಿ ಮತ್ತು ಆಹಾರ ಸೇವಿಸುವಾಗ ಸರಿಯಾಗಿ ಜಗಿದು ಸೇವಿಸಿ. ಊಟದಲ್ಲಿ ಹೆಚ್ಚು ಸೊಪ್ಪು ತರಕಾರಿ ಮತ್ತು ಸಲಾಡ್ ಗಳು ಇರಲಿ. ಕೆಂಪು ಮೆಣಸು ಹಾಕಿದ ಆಹಾರಕ್ಕಿಂತ ಕಾಳು ಮೆಣಸು, ಜೀರಿಗೆ ಪುಡಿ ಹೆಚ್ಚು ಬಳಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ