ಶುಂಠಿ ತಿನ್ನುವುದರ ಲಾಭಗಳು

ಬುಧವಾರ, 1 ಮಾರ್ಚ್ 2017 (10:50 IST)
ಬೆಂಗಳೂರು: ನಮ್ಮ ಅಡುಗೆ ಮನೆಯಲ್ಲಿ ಶುಂಠಿ ಇಲ್ಲದೇ ಇರುವುದಿಲ್ಲ. ಶುಂಠಿ ಶೀತ ಸಂಬಂಧೀ ರೋಗಗಳಿಗೆ ಉತ್ತಮ ಮನೆ ಮದ್ದು ಎಂದು ಕೇಳಿರುತ್ತೇವೆ. ಇದರ ಉಪಯೋಗಗಳು ಏನೇನು ಎಂದು ನೋಡೋಣ.


ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ, ಹಸಿ ಶುಂಠಿ ಮತ್ತು ಉಪ್ಪು ಹಾಕಿ ತಿಂದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ. ರಾತ್ರಿಯಿಡೀ ಕೆಮ್ಮಿನಿಂದಾಗಿ ನಿದ್ರೆ ಮಾಡಲೂ ತೊಂದರೆಯಾಗುತ್ತಿದ್ದರೆ, ಹೀಗೆ ಮಾಡಬಹುದು.

ಶುಂಠಿ ಜೀರ್ಣಕ್ರಿಯೆಗೂ ಸಹಕಾರಿ. ಹಲಸಿನ ಕಾಯಿ ತಿಂದರೆ ಶುಂಠಿ ತಿನ್ನಬೇಕು ಎಂಬ ಆಡುಮಾತಿದೆ. ಅದರಂತೆ ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸಿದಾಗ ಒಂದು ತುಂಡು ಶುಂಠಿ ತಿಂದರೆ ಬೇಗನೇ ಜೀರ್ಣವಾಗುತ್ತದೆ. ಅಥವಾ ಚಹಾ ಮಾಡುವಾಗ ಚಿಕ್ಕ ಚೂರು ಶುಂಠಿ ಸೇರಿಸಿ ಮಾಡಿದರೂ, ಜೀರ್ಣಕ್ರಿಯೆ ಸುಗಮವಾಗುತ್ತದೆ.

ನಿಲ್ಲದ ಕೆಮ್ಮಿದ್ದರೆ, ಶುಂಠಿ ರಸಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿಕೊಂಡು ಸೇವಿಸಿದರೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ. ಶುಂಠಿಯಲ್ಲಿ ನೋವು ನಿವಾರಿಸುವ ಗುಣ ಹೊಂದಿದೆ. ಹೀಗಾಗಿ ಮಾಂಸ ಖಂಡದ ನೋವು, ಸಂಧಿ ನೋವು ಇದ್ದರೆ ಶುಂಠಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ