ಕೋಕಂ ಬಳಸಿ ತಯಾರಿಸಲಾದ ಜ್ಯೂಸ್ ಪೋಷಕಾಂಶಗಳ ಆಗರವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ ಮೊದಲಾದ ಖನಿಜಗಳನ್ನು ಹೊಂದಿದೆ.
* ಇದರ ಸೇವನೆಯಿಂದ ಡೈಯೇರಿಯಾ ಮತ್ತು ಅತಿಸಾರ ಕಡಿಮೆಯಾಗುತ್ತದೆ
* ಇದರಲ್ಲಿ ಆಮ್ಲಗಳು ಜಠರರಸವನ್ನು ಸಮರ್ಪಕ ಆಮ್ಲೀಯತೆಯಲ್ಲಿಡಲು ಸಹಕರಿಸುವುದರಿಂದ ಜೀರ್ಣಕ್ರಿಯೆಯು ಸರಿಯಾಗಿರುತ್ತದೆ
* ಇದರ ಸೇವನೆಯಿಂದ ಪಿತ್ತ, ತಲೆ ಬೇನೆ, ತಲೆ ಭಾರ ಶಮನವಾಗುತ್ತದೆ
* ಇದರ ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ
* ಇದರ ಸೇವನೆಯಿಂದ ದೇಹದಲ್ಲಿರುವ ವಿಷಯುಕ್ತ ವಸ್ತುಗಳು ಹೊರಹೋಗುತ್ತವೆ
* ಇದರ ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಸುಸೂತ್ರವಾಗಿರುತ್ತದೆ.