ದಾಸವಾಳ ಹೂವಿನಲ್ಲಿಯೂ ಆರೋಗ್ಯ ಪ್ರಯೋಜನಗಳಿವೆ ನೋಡಿ

ಶುಕ್ರವಾರ, 24 ಆಗಸ್ಟ್ 2018 (18:52 IST)
ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿ ಕಂಡುಬರುವ ಹೂವಿನ ಗಿಡಗಳಲ್ಲಿ ದಾಸವಾಳವೂ ಒಂದು. ಅತ್ಯಂತ ವೇಗವಾಗಿ ಬೆಳೆಯುವ ಗಿಡಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂ ಸಹ ಈ ಗಿಡವು ಹೊಂದಿದೆ. ದಾಸವಾಳ ಹೂವನ್ನು ಕೇವಲ ಅಲಂಕಾರದಲ್ಲಿ ಮಾತ್ರ ಬಳಸುವುದಲ್ಲದೇ ದೇವರ ಪೂಜೆಗಳಲ್ಲಿ, ವೈದ್ಯಕೀಯ ಚಿಕಿತ್ಸೆಗಳಲ್ಲಿ, ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿಯೂ ಇದನ್ನು ಬಳಸಲಾಗುತ್ತದೆ. ಇದಲ್ಲದೇ ಈ ಗಿಡ, ಹೂವುಗಳು ಆರೋಗ್ಯವರ್ಧಕವೂ ಹೌದು. ಹಾಗಾದರೆ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ನೋಡೋಣ.
* ಪ್ರಮುಖವಾಗಿ ತಲೆಗೂದಲ ಬೆಳವಣಿಗೆಯಲ್ಲಿ ದಾಸವಾಳ ಹೂವು ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಕೂದಲಿಗೆ ಕಪ್ಪು ಬಣ್ಣವನ್ನು ನೀಡುವುದಲ್ಲದೇ 
 
ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
 
* ಈ ಹೂವಿನಲ್ಲಿ ಆಂಟಿಆಕ್ಸಿಡೆಂಟ್ಸ್ ಅಧಿಕವಿರುವುದರಿಂದ ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
* ದಾಸವಾಳದ ಜ್ಯೂಸ್ ಕುಡಿಯುವುದರಿಂದ ದೇಹದ ಉಷ್ಣವು ಜಾಸ್ತಿ ಆಗಿದ್ದರೆ ಅದು ನಿಯಂತ್ರಣಕ್ಕೆ ಬರುತ್ತದೆ.
 
* ಡ್ರೈಸ್ಕಿನ್ ಇರುವವರು, ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು ದಾಸವಾಳದ ಜ್ಯೂಸ್ ಕುಡಿದರೆ ದೇಹದಲ್ಲಿ ನೀರಿನ ಅಂಶವು ಸಮತೋಲನಕ್ಕೆ 
 
ಬರುತ್ತದೆ. 
 
* ದಾಸವಾಳದ ಎಲೆಯ ರಸವನ್ನು ಹಿಂಡಿ ಗಾಯದ ಮೇಲೆ ಹಾಕಿದರೆ ಗಾಯವು ಬೇಗನೆ ಗುಣಮುಖವಾಗುವುದು.
 
* ಕೆಂಪು ದಾಸವಾಳವು ನೈಸರ್ಗಿಕವಾಗಿ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿಯಾದ 
 
ಔಷಧಿಯಾಗಿದೆ.
 
* ಹೃದಯ ಸಂಬಂಧಿ ತೊಂದರೆಗಳಿಗೆ ದಾಸವಾಳ ಹೂವಿನ ರಸದ ಕಷಾಯವನ್ನು ಕುಡಿದರೆ ದೇಹದಲ್ಲಿನ ಅತಿಯಾದ ರಕ್ತದೊತ್ತಡವು ನಿಯಂತ್ರಣಕ್ಕೆ 
 
ಬರುತ್ತದೆ.
 
* ದಾಸವಾಳ ಹೂವಿನ ಟೀ ಅಥವಾ ರಸವನ್ನು ಸೇವಿಸಿದರೆ ಹೃದ. ಸ್ಥಂಭನಕ್ಕೆ ಕಾರಣವಾಗುವ ಮತ್ತು ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಅನ್ನು 
 
ಕಡಿಮೆ ಮಾಡುತ್ತದೆ.
 
* ದಾಸವಾಳದ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೆ ಕುದಿಸಿ ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ 
 
ಗುಣಮುಖವಾಗುತ್ತದೆ.
 
* ಮಹಿಳೆಯರಲ್ಲಿ ಅಧಿಕ ಬಿಳುಪು ಹೋಗುವ ಸಮಸ್ಯೆ ಕಂಡುಬಂದರೆ ಬಿಳಿ ದಾಸವಾಳವನ್ನು ತಿಂದರೆ ಬಿಳುಪು ಹೋಗುವುದು ಕಮ್ಮಿಯಾಗುತ್ತದೆ.
* ದಾಸವಾಳ ಸಸ್ಯದ ಕಾಂಡದಲ್ಲಿರುವ ಫೈಬರ್ ಒಳ್ಳೆಯ ಗುಣಮಟ್ಟದ್ದಾಗಿದ್ದು ಇದನ್ನು ಬಟ್ಟೆ, ಬಲೆ ಮತ್ತು ಪೇಪರ್ ತಯಾರಿಸಲು ಬಳಸಲಾಗುತ್ತದೆ. 
* ಬಿಳಿ ದಾಸವಾಳದ ಮೊಗ್ಗುಗಳನ್ನು ನಸುಕಿನ ಜಾವದಲ್ಲಿ ಸೇವಿಸುವುದರಿಂದ ಎಲ್ಲಾ ರೋಗಗಳು ನಿವಾರಣೆಯಾಗುತ್ತದೆ.
* ದಾಸವಾಳ ಹೂವಿನ ಟೀ ಕುಡಿದರೆ ಕಿಡ್ನಿ ಸಮಸ್ಯೆ ಬರದಂತೆ ತಡೆಯಲು ಮತ್ತು ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. 
* ಇದು ಸೂರ್ಯನ ನೇರಳಾತೀತ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುವುದರಿಂದ ಸನ್‌ಸ್ಕ್ರೀನ್ ಕ್ರೀಂಗಳಲ್ಲಿ ಮತ್ತು ಇತರ ಸೌಂದರ್ಯವರ್ಧಕಗಳಲ್ಲಿ 
 
ಬಳಸುತ್ತಾರೆ.
* ಮಹಿಳೆಯರಲ್ಲಿ ಮೆನೊಪಾಸ್ ಸಮಯದಲ್ಲಿ ಮೈಯೆಲ್ಲಾ ಬೆವರುವುದು, ದಣಿವಾಗುವುದು ಸಾಮಾನ್ಯವಾದ ವಿಚಾರವಾಗಿದೆ. ಆ ಸಮಯದಲ್ಲಿ ಕೆಂಪು 
 
ಅಥವಾ ಬಿಳಿ ದಾಸವಾಳದ ಹೂವಿನ ಟೀ ಕುಡಿದರೆ ದೇಹಕ್ಕೆ ಒಳ್ಳೆಯದು.
* ದಾಸವಾಳ ಎಲೆಯ ಲೋಳೆಯನ್ನು ತಲೆಗೂದಲಿಗೆ ಹಚ್ಚುವುದರಿಂದ ಕೂದಲು ಫಳಫಳ ಎಂದು ಹೊಳೆಯುತ್ತದೆ.
* ದಾಸವಾಳವನ್ನು ಅಕ್ಕಿಯ ಜೊತೆ ನೆನೆಸಿ ರುಬ್ಬಿ ದೋಸೆಯನ್ನು ಮಾಡುತ್ತಾರೆ. ಈ ದೋಸೆಯು ದೇಹಕ್ಕೆ ತಂಪನ್ನು ಕೊಡುತ್ತದೆ.
* ದಾಸವಾಳದ ಎಲೆಯ ಜೊತೆ ಹೂವನ್ನು ಹಾಕಿ ಪೇಸ್ಟ್ ಮಾಡಿ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ಅಕಾಲಿಕ ನೆರಿಗೆ ಉಂಟಾಗುವುದನ್ನು 
 
ತಪ್ಪಿಸಬಹುದು.
 
ಆರೋಗ್ಯಕ್ಕೂ, ಸೌಂದರ್ಯವರ್ಧಕವಾಗಿಯೂ, ಹಲವಾರು ಚಿಕಿತ್ಸೆಗಳಲ್ಲಿಯೂ, ಅಲಂಕಾರದಲ್ಲಿಯೂ, ದೇವರ ಪೂಜೆಗಳಲ್ಲಿಯೂ ಬಳಕೆಯಾಗುವ ಈ 
 
ಹೂವಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಅಲ್ಲವೇ.. ಆದರೆ ಆರೋಗ್ಯದ ವಿಚಾರದಲ್ಲಿ ನಾವು ನಿರ್ಲಕ್ಷ್ಯವನ್ನು ತೋರದೇ ಸಮಸ್ಯೆಗಳು ಉಲ್ಬಣವಾಗುವ 
 
ಮೊದಲು ವೈದ್ಯರನ್ನು ಕಾಣುವುದು ಒಳಿತು. ವೈದ್ಯರ ಮಾರ್ಗದರ್ಶನವಿಲ್ಲದೇ ಔಷಧಿಗಳನ್ನು ತೆಗೆದುಕೊಳ್ಳಬಾರದು. ಹೂವು ಎಂದ ಮೇಲೆ ಅದಕ್ಕೆ 
 
ಕೀಟಗಳು, ದುಂಬಿಗಳು ಬರುವುದು ಸಹಜ. ಹಾಗಾಗಿ ಸರಿಯಾಗಿ ಹೂವನ್ನು ಪರಿಶೀಲಿಸಿ ನಂತರ ಬಳಸಬೇಕು. ಹಾಗಾದರ ಇನ್ನೇಕೆ ತಡ?  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ