ಹೃದಯಾಘಾತಕ್ಕೆ ಮೊದಲು ಹೀಗಾಗುತ್ತದೆ!

ಗುರುವಾರ, 11 ಅಕ್ಟೋಬರ್ 2018 (07:41 IST)
ಬೆಂಗಳೂರು: ಹೃದಯಾಘಾತವಾಗುವ ಮೊದಲು ಯಾವ ರೀತಿ ಲಕ್ಷಣಗಳಿರುತ್ತವೆ? ಇಂತಹ ಅನುಮಾನಗಳಿಗೆ ಹಲವರು ಹಲವು ರೀತಿಯ ಉತ್ತರ ಕಂಡುಕೊಂಡಿರುತ್ತಾರೆ. ಆದರೆ ಹೃದಯಾಘಾತದ ಲಕ್ಷಣಗಳೇನು ಗೊತ್ತಾ?

ಅರಿಯದ ನೋವು
ಹೃದಯಾಘಾತಕ್ಕೆ ಮೊದಲು ಎದೆಯ ಮಧ್ಯಭಾಗದಲ್ಲಿ ಅರಿಯದ, ಕಾರಣವಿಲ್ಲದೇ ಒಂದು ರೀತಿಯ ತೀವ್ರತರದ ನೋವು ಕಾಣಿಸಿಕೊಳ್ಳಬಹುದು.

ಕುತ್ತಿಗೆ ಭಾಗದ ನೋವು
ಕುತ್ತಿಗೆ ಭಾಗ, ಹೆಗಲು ಮುಂತಾದ ದೇಹದ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

ತಲೆಸುತ್ತು
ನೋವುಗಳು ಮಾತ್ರವಲ್ಲದೆ, ತಲೆಸುತ್ತು ಬರುತ್ತಿದ್ದರೂ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಸುಸ್ತು
ವಿಪರೀತ ಸುಸ್ತು, ಬಳಲಿಕೆ, ಮೈ ಎಲ್ಲಾ ಬೆವರು, ವಾಂತಿಯಾಗುತ್ತಿದ್ದರೆ ಹೃದಯಾಘಾತದ ಲಕ್ಷಣವಾಗಿರಬಹುದು.

ಉಸಿರು ಕಟ್ಟುವುದು
ಹೃದಯಾಘಾತಕ್ಕೆ ಮೊದಲು ಉಸಿರಾಟಕ್ಕೆ ಕಷ್ಟವಾಗುವುದು ಅಥವಾ ಉಸಿರು ಕಟ್ಟಿದಂತಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ