ಅನಿಯಮಿತ ಹಾಗೂ ಅವೈಜ್ಞಾನಿಕ ಆಹಾರ ಪದ್ಧತಿ, ಹಾರ್ಮೋನುಗಳ ಅಸಮತೋಲನ, ಜಂಕ್ ಫುಡ್ಗಳ ಯಥೇಚ್ಛ ಸೇವನೆ, ಅನುವಂಶೀಯತೆ ಹೀಗೆ ನಾನಾ ಕಾರಣಗಳಿಂದ ದೇಹ ತೂಕ ಏರಿಕೆಯಾಗುತ್ತದೆ. ಇದನ್ನು ಕಡಿಮೆ ಮಾಡಲು ವ್ಯಾಯಾಮ, ಡಯೆಟ್ ಮೊರೆಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇಹ ತೂಕ ಇಳಿಕೆ ದೊಡ್ಡ ಉದ್ಯಮವಾಗಿ ಬದಲಾಗುತ್ತಿದೆ.
ಜನರು ಇವುಗಳ ಕಡೆಗೆ ವಾಲುವ ಬದಲು ಕೆಲವು ಉತ್ತಮ್ಮ ಅಭ್ಯಾಸಗಳನ್ನು ರೂಢಿಸಿಕೊಂಡು ಅನುಸರಿಸುತ್ತಾ ಬಂದರೆ ದೇಹ ತೂಕ ಇಳಿಕೆಯಾಗುವದರ ಜೊತೆಯಲ್ಲಿ ದೇಹದ ಆಕಾರವನ್ನು ನಿಯಮಿತವಾಗಿ ಕಾಪಾಡಿಕೊಳ್ಳಬಹುದು. 1. ಊಟಕ್ಕಿಂತ ತಿಂಡಿ ಹೆಚ್ಚಾಗಿ ಸೇವಿಸಿ
ಸ್ಥೂಲಕಾಯದ ಜರ್ನಲ್ನ ಅಧ್ಯಯನ ಪ್ರಕಾರ, ಸ್ಥೂಲಕಾಯದ ಮಹಿಳೆಯರ ಒಂದು ಗುಂಪು ಉಪಾಹಾರದಲ್ಲಿ 700 ಕ್ಯಾಲೊರಿ, ಊಟಕ್ಕೆ 500 ಮತ್ತು ಭೋಜನಕ್ಕೆ 200 ಕ್ಯಾಲೊರಿಗಳನ್ನು ಸೇವಿಸಿತು. ಇನ್ನೊಂದು ಗುಂಪು ಬೆಳಗ್ಗೆ ಉಪಹಾರ 200 ಮತ್ತು ರಾತ್ರಿ ಊಟ 700 ಕ್ಯಾಲೋರಿ ಸೇವಿಸಿದರು. 13 ತಿಂಗಳ ನಂತರ, ಉಪಾಹಾರ ಹೆಚ್ಚು ತಿನ್ನುವವರು 18 ಪೌಂಡ್ಗಳಷ್ಟು ತೂಕ ಇಳಿಸಿದರು, ಆದರೆ ಹೆಚ್ಚು ಊಟ ಮಾಡುತ್ತಿದ್ದವರು ಕೇವಲ ಏಳು ಪೌಂಡ್ ತೂಕ ಮಾತ್ರ ಕಳೆದುಕೊಂಡರು. 2. ಜಾಗಿಂಗ್ ಮಾಡಿ
ಹೌದು ದಿನ ಸೇವಿಸುವ ಜಂಕ್ ಫುಡ್ ಕರಗಿಸಲು ಪ್ರತಿದಿನ ನಿಮ್ಮ ಮನೆ ಅಥವಾ ಕಟ್ಟಡದ ಸುತ್ತಲೂ ಒಂದು ಸುತ್ತು ಜಾಗ್ ಮಾಡಿ ಅಥವಾ ಮೆಟ್ಟಿಲುಗಳನ್ನು ಮೇಲಕ್ಕೆ ಮತ್ತು ಕೆಳಗೆ ಹತ್ತಿ ಇಳಿಯಿರಿ. ಪ್ರತಿ ಸೆಶನ್ಗೆ 35 ರಿಂದ 140 ಕ್ಯಾಲೊರಿಗಳು ನಾಶವಾಗುತ್ತದೆ. ಪೌಷ್ಟಿಕತಜ್ಞರು ಕೂಡ ಇದೇ ಸಲಹೆ ನೀಡುತ್ತಾರೆ. 3. ಕನ್ನಡಿ ಎದುರು ತಿನ್ನಿ
ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ರಿಸರ್ಚ್ ಜರ್ನಲ್ನಲ್ಲಿನ ಒಂದು ಅಧ್ಯಯನವು ಕನ್ನಡಿಗಳ ಮುಂದೆ ತಿನ್ನುವುದು ಜನರು ತಿನ್ನುವ ಪ್ರಮಾಣವನ್ನು ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಿದೆ ಎಂದು ಕಂಡುಹಿಡಿದಿದೆ. ಕನ್ನಡಿ ಮುಂದೆ ತಿನ್ನುವುದರಿಂದ ನೀವು ಏಕೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ನಿಮಗೆ ನೆನಪಿಸುತ್ತದೆ. ಡಯೆಟ್ನಲ್ಲಿ ಈ ಸಣ್ಣ ಬದಲಾವಣೆ ಮಾಡಿ ಅದು ನಿಮಗೆ ಸಾಕಷ್ಟು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. 4. ಆಹಾರದ ಸುವಾಸನೆ ತೆಗೆದುಕೊಳ್ಳಬೇಡಿ
ಸೆಲ್ ಮೆಟಾಬಾಲಿಸಮ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು, ಇಲಿಗಳಲ್ಲಿ ಆಹಾರ ಸುವಾಸನೆಯ ಪ್ರಜ್ಞೆಯು ದೇಹದ ಹಸಿವು ಮತ್ತು ಚಯಾಪಚಯವನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕಂಡುಹಿಡಿದಿದೆ. ಆಹಾರದ ಪರಿಮಳವು ಸ್ಥೂಲಕಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮತ್ತಷ್ಟು ಸಾಬೀತುಪಡಿಸಲು, ಸಂಶೋಧಕರು "ಸೂಪರ್-ಸ್ಮೆಲರ್" ಇಲಿಗಳನ್ನು ರಚಿಸಿದರು. ಹೆಚ್ಚು ವಾಸನೆಯ ಪ್ರಜ್ಞೆ ಹೊಂದಿರುವ ಇಲಿಗಳು ತೂಕವನ್ನು ಹೆಚ್ಚಿಸಿಕೊಂಡವು ಮತ್ತು ಬೊಜ್ಜು ಹೊಂದಿದವು. ತೂಕ ನಿಯಂತ್ರಿಸಬೇಕೆನ್ನುವವರು ಆಹಾರದಿಂದ ಹೊಮ್ಮುವ ಪರಿಮಳದಿಂದ ದೂರ ಇರಿ. ಏಕೆಂಧರೆ ಇದು ನಮನ್ನು ಯಥೇಚ್ಛವಾಗಿ ಸೇವಿಸುವಂತೆ ಪ್ರೇರೇಪಿಸುತ್ತದೆ. 5. ಆಹಾರದ ಫೋಟೋ ಅಥವಾ ವಿಡಿಯೋ ಮಾಡಿ
ಇದು ಪರಿಣಾಮಕಾರಿ ವಿಧಾನ. ಹೌದು ನೀವು ತಿನ್ನುವ ಆಹಾರದ ಫೋಟೋ ಅಥವಾ ವಿಡಿಯೋ ಮಾಡಿದ್ದಲ್ಲಿ ಇದು ಮುಂದಿನ ಬಾರಿ ತಿನ್ನುವಾಗ ಹಿಂದಿನ ಸಮಯ ಎಷ್ಟು ಆಹಾರ ಸೇವಿಸಿದ್ದೆ, ಈಗ ಎಷ್ಟು ಸೇವಿಸಬೇಕು ಎಂದು ನೆನಪಿಸುತ್ತದೆ. 6. ಸುತ್ತಿದ ಕ್ಯಾಂಡಿ ಸೇವಿಸಿ
ಹೌದು ತೂಕ ನಷ್ಟ ಮಾಡುವಲ್ಲಿ ಇದೂ ಹೆಚ್ಚು ಪರಿಣಾಮಕಾರಿಯಾಗಿದೆ. ಜನರು ಸುತ್ತಿದ ಕ್ಯಾಂಡಿಯ ಮೇಲ್ಮೈ ಪೇಪರ್ ತೆಗೆಯುವಲ್ಲಿ ಶೇಕಡಾ 30ರಷ್ಟು ಕ್ಯಾಂಡಿ ತಿನ್ನಬೇಕೆನ್ನುವ ಆಸೆಯೇ ಹುದುಗಿ ಹೋಗಿರುತ್ತದೆ. ಅಂದರೆ ಇದರ ಪೇಪರ್ ತೆಗೆಯಲು ಹೆಚ್ಚು ಶ್ರಮ ಬೇಕಾಗುತ್ತದೆ. ಇದು ನಮಗೆ ಕಡಿಮೆ ತಿನ್ನುವಂತೆ ಮಾಡುತ್ತದೆ. 7. ನಿಮ್ಮ ಪ್ಲೇಟ್ ಬಣ್ಣದ ಬಗ್ಗೆ ಯೋಚಿಸಿ
ಇತರರಿಗೆ ಹೋಲಿಸಿದರೆ ಕೆಲವು ತಟ್ಟೆಯಲ್ಲಿ ಬಡಿಸಿದಾಗ ಜನರು ಕಡಿಮೆ ಆಹಾರ ಸೇವಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಒಂದು ಅಧ್ಯಯನದ ಪ್ರಕಾರ, ಬಿಳಿ ತಟ್ಟೆ ಪಡೆದ ಜನರು ಕಪ್ಪು ಅಥವಾ ಕೆಂಪು ತಟ್ಟೆ ಪಡೆದವರಿಗಿಂತ ಕಡಿಮೆ ಆಹಾರ ತಿನ್ನುತ್ತಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. 8. ಊಟದ ಮೊದಲು ಸೂಪ್ ಕುಡಿಯಿರಿ
ಊಟದ ಮೊದಲು ಸೂಪ್ ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗಿ ಕಡಿಮೆ ಆಹಾರ ಸೇವಿಸುತ್ತೇವೆ. ಅಪೆಟೈಟ್ ಜರ್ನಲ್ನಲ್ಲಿನ ಸಂಶೋಧನೆಯು ಕಡಿಮೆ ಕ್ಯಾಲೊರಿಯ ಸ್ವಲ್ಪ ಸೂಪ್ ಅನ್ನು ಊಟಕ್ಕೆ ಮುಂಚಿತವಾಗಿ ಕುಡಿಯುವ ಜನರು ಶೇ. 20 ಕಡಿಮೆ ಆಹಾರ ತಿನ್ನುತ್ತಾರೆ. ಜೊತೆಗೆ, ಸೂಪ್ ಕುಡಿದವರಿಗೆ ಹಸಿವಿನ ಬಗ್ಗೆ ಅಥವಾ ಊಟದ ಕೊನೆಯಲ್ಲಿ ಕಡಿಮೆ ಹೊಟ್ಟೆ ತುಂಬಿದ ಅನುಭವದ ವರದಿಯಾಗಿಲ್ಲ. ತೂಕ ನಷ್ಟಕ್ಕೆ ಸೂಪ್ ಉತ್ತಮ ಮಾಧ್ಯಮ ಎಂದು ಹೇಳಿದೆ. 9. ನಿಮ್ಮ ಸ್ಮೂಥಿಗಳು ದಪ್ಪವಾಗಿರಲಿ
ಸ್ಮೂಥಿಗಳು ಏಕಕಾಲದಲ್ಲಿ ಬಹಳಷ್ಟು ಹಣ್ಣುಗಳು, ತರಕಾರಿಗಳನ್ನು ತಿನ್ನಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ತಯಾರಿಸಿಕೊಳ್ಳುವ ಸ್ಮೂಥಿಗಳಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತದೆ. ಹಾಗಾಗಿ ಹೆಚ್ಚು ಸೇವಿಸಿದರೂ ಯಾವುದೇ ತೊಂದರೆಯಾಗುವುದಿಲ್ಲ. ಸ್ಮೂಥಿಗಳು ದಪ್ಪವಾಗಿದ್ದರೆ ಕಡಿಮೆ ಕುಡಿದರೂ ಹೆಚ್ಚು ಕುಡಿದಂತಾಗಿ ಹೊಟ್ಟೆ ತುಂಬಿದಂತಾಗುತ್ತದೆ. 10. ಗಾಢವಾದ ಕತ್ತಲಿನ ಕೋಣೆಯಲ್ಲಿ ಮಲಗಿಕೊಳ್ಳಿ
ರಾತ್ರಿಯ ನಿದ್ರೆಯು ಹಸಿವನ್ನು ನಿಯಂತ್ರಿಸಲು ಮತ್ತು ನಿಮ್ಮ ತೂಕ ಹೆಚ್ಚಾಗುವ ಅಪಾಯ ಕಡಿಮೆ ಮಾಡಲು ಒಂದು ಉತ್ತಮ ಮಾರ್ಗವಾಗಿದೆ. ಆದರೆ ನೀವು ಮಲಗುವ ಕೋಣೆಯಲ್ಲಿನ ಬೆಳಕು ನಿಮ್ಮ ದೇಹದ ಗಾತ್ರದ ಮೇಲೂ ಪರಿಣಾಮ ಬೀರಬಹುದು. ಅಂದರೆ ಗಾಢವಾದ ಬೆಳಕಿನಲ್ಲಿ ನಿದ್ರಿಸುವವವರಿಗೆ ಹೆಚ್ಚು ಹಸಿವಾಗುವುದಿಲ್ಲ, ಮಂದ ಬೆಳಕು ಅಥವಾ ಪ್ರಕಾಶಮಾನವಾದ ಬೆಳಕಿನಲ್ಲಿ ನಿದ್ರಿಸುವವರಿಗೆ ತಿನ್ನಬೇಕೆನ್ನುವ ಆಸೆಯಾಗುತ್ತದೆ. ಆದ ಕಾರಣ ನೀವು ರಾತ್ರಿ ಮಲಗುವ ವೇಳೆ ನಿಮ್ಮ ಕೋಣೆ ಕತ್ತಲಿನಿಂದ ಆವೃತವಾಗಿರಲಿ ಎಂಬುದು ಸಂಶೋಧಕರ ಸಲಹೆ.