ಮದುವೆಯಾಗಿ ಹೋಗುವ ಮಗಳಿಗೆ ತಾಯಿಯು ಹೇಳಲೇಬೇಕಾದ ಐದು ವಿಷಯಗಳು ಇಲ್ಲಿವೆ ನೋಡಿ

ಶನಿವಾರ, 6 ಜನವರಿ 2018 (08:07 IST)
ಬೆಂಗಳೂರು : ಹೆಣ್ಣು ಮಕ್ಕಳು ತಾಯಿಯ ಜೊತೆ ಮನಸು ಬಿಚ್ಚಿ ಮಾತನಾಡಿದ ಹಾಗೆ ಬೇರೆಯವರ ಜೊತೆ ಇರಲು ಆಗುವುದಿಲ್ಲ. ಹಾಗೆ ತಾಯಿಯು ಕೂಡ ತಮ್ಮ ಹೆಣ್ಣು ಮಕ್ಕಳು ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು ತಿಳಿಸಿ ಹೇಳುತ್ತಲೆ ಇರಬೇಕು. ಆಗ ಯಾವ ಹೆಣ್ಣು ಮಕ್ಕಳಿಗೂ ಜೀವನದಲ್ಲಿ ಸಮಸ್ಯೆಗಳು ಎದುರಾಗಲ್ಲ. ಅದರಲ್ಲೂ ಪ್ರತಿಯೊಬ್ಬ ತಾಯಿಯು ತಮ್ಮ ಮಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ಕೆಲವು ವಿಷಯವನ್ನು ತಪ್ಪದೆ ಹೇಳಬೇಕು. ಅದೇನೆಂದರೆ-

  1. ತಾಯಿ ಮಗಳಿಗೆ ಕೋಪ ಬಂದಾಗ ಆಕೆಯ ಮಾತು ಮತ್ತು ನಡವಳಿಕೆ ಮೇಲೆ ಹಿಡಿತವಿರಬೇಕು, ಬಾಯಿಗೆ ಬಂದದ್ದು ಮಾತನಾಡಬಾರದು, ಕೈಗೆ ಸಿಕ್ಕಿದ್ದನ್ನು ಎಸೆಯಬಾರದು, ಹೀಗೆ ಮಾಡಿದರೆ ಬೇರೆಯವರು ನಿನ್ನನ್ನು ನೋಡಿ ನಗುತ್ತಾರೆ. ಗಂಡ ಆಚೆಗೆ ಹೋದಾಗ ಆತನನ್ನು ನೋಡಿ ನಗುತ್ತಾರೆ ಎಂದು ಹೇಳಬೇಕು.
  2. ಚಿಕ್ಕ ಚಿಕ್ಕ ವಿಷಯಕ್ಕೆ ಜಗಳ ಆಡಬಾರದು, ಅದು ಗಂಡಸರಿಗೆ ತುಂಬಾ ಕಿರಿಕಿರಿ ಮಾಡುತ್ತೆ. ಹೇಳಿದ್ದನ್ನೆ ಪದೇ ಪದೇ ಹೇಳಬಾರದು, ಅದು ಗಂಡ ಸಹನೆ ಕಳೆದುಕೊಳ್ಳುವಂತೆ ಮಾಡುತ್ತದೆ. ಗಂಡನ ಜೊತೆ ವಾದ ಮಾಡಬಾರದು.
  3. ಬೇರೆಯವರ ಜೊತೆ ಗಂಡನನ್ನು ಹೋಲಿಕೆ ಮಾಡಬಾರದು, ಅದನ್ನು ಗಂಡ ಯಾವತ್ತು ಸಹಿಸುವುದಿಲ್ಲ. ಪ್ರತಿಯೊಂದು ವಿಷಯಕ್ಕೂ ಗಂಡನ ತಂದೆ, ತಾಯಿ, ಕುಟುಂಬದವರನ್ನು ಎಳೆಯಬಾರದು, ಅದು ಗಂಡನಿಗೆ ನೋವು ಮಾಡುತ್ತದೆ.
  4.  ಗಂಡನ ಆಲೋಚನೆಗಳನ್ನು, ಚಿಂತನೆಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಇದರಿಂದ ಅವರಲ್ಲಿ ಧೈರ್ಯ ಹೆಚ್ಚುತ್ತದೆ ಹಾಗು ನಿನ್ನ ಬಗ್ಗೆ ಗೌರವದ ಜೊತೆಗೆ ಪ್ರೀತಿ ಹೆಚ್ಚುತ್ತದೆ.
  5. ಸಂಬಂಧಿಕರ ಮುಂದೆ, ಇತರರ ಮುಂದೆ ಗಂಡನ ಬಗ್ಗೆ ಕೀಳಾಗಿ ಮಾತನಾಡಬಾರದು, ಇಬ್ಬರ ಮಧ್ಯದಲ್ಲಿ  ಮನಸ್ತಾಪವಿದ್ದರೂ ಅದನ್ನು ಬೇರೆಯವರ ಮುಂದೆ ತೋರಿಸಬಾರದು. ಸಮಸ್ಯೆಯನ್ನು ನೀವಿಬ್ಬರೆ ಬಗೆಹರಿಸಬೇಕು.
ಹೀಗೆ ಪ್ರತಿಯೊಬ್ಬ ತಾಯಿಯು ತಮ್ಮ ಮಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ಈ 5 ವಿಷಯವನ್ನು ತಪ್ಪದೆ ಹೇಳಿದರೆ, ಮಗಳು ಸುಖ ಸಂತೋಷದಿಂದ ಗಂಡನ ಜೊತೆ ಜೀವನ ನಡೆಸುತ್ತಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ