ಬೊಕ್ಕ ತಲೆಯ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಸೋಮವಾರ, 25 ಡಿಸೆಂಬರ್ 2017 (08:30 IST)
ಬೆಂಗಳೂರು: ಹೆಚ್ಚು ಜನರಿಗೆ ಬೊಕ್ಕ ತಲೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಹೆಚ್ಚು ಕಂಡುಬರುವುದು ಗಂಡಸರಲ್ಲಿ. ಪ್ರತಿ 5 ರಲ್ಲಿ 4 ಜನ ಗಂಡಸರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ಸರಿಯಾಗಿ ಊಟ, ನಿದ್ದೆ ಮಾಡದಿರುವುದರಿಂದ ಕೂದಲು ಉದುರಿ ಬೊಕ್ಕ ತಲೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆಯನ್ನು ಮನೆಮದ್ದುಗಳಿಂದ ಹೋಗಲಾಡಿಸಬಹುದು.


ಸೀಬೆ ಮರದ 10-15 ಎಲೆ ತಂದು ಕ್ಲೀನ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ½ ಲೀಟರ್ ನೀರು ಹಾಕಿ 15 ನಿಮಿಷ ಕುದಿಸಿ. ನಂತರ ತಣ್ಣಗಾಗಿಸಿ ಸೋಸಿ ಅದನ್ನು ತಲೆಗೆ ಹಾಕಿ 10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ನಂತರ ಸ್ನಾನ ಮಾಡಿ. ಅದರೆ ತಲೆ ಸ್ನಾನಕ್ಕೆ ಆದಷ್ಟು ಹರ್ಬಲ್ ಶಾಂಪೂ ಬಳಸಿ. ವಾರದಲ್ಲಿ ಎರಡು ಬಾರಿಯಾದರು ಹೀಗೆ ಮಾಡಿ. 2 ತಿಂಗಳುಗಳ ಕಾಲ ಹೀಗೆ ಮಾಡಿದರೆ ಕೂದಲು ಬೆಳೆಯುತ್ತದೆ. ಇದನ್ನು ಮಹಿಳೆಯರು ಕೂಡ ಉಪಯೋಗಿಸಬಹುದು.ಇದರಿಂದ ಕೂದಲು ಸೋಂಪಾಗಿ ಬೆಳೆಯುತ್ತದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ