ಪಿರಿಯಡ್ಸ್ ಸಮಯದಲ್ಲಿ ಕಂಡುಬರುವ ಸ್ತನದ ನೋವು ಕಡಿಮೆಮಾಡಲು ಇಲ್ಲಿದೆ ಟಿಪ್ಸ್
ಗುರುವಾರ, 19 ಏಪ್ರಿಲ್ 2018 (05:56 IST)
ಬೆಂಗಳೂರು : ಪಿರಿಯಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ಸ್ತನಗಳ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಾಗುವುದರಿಂದ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ನೋವು ಕಡಿಮೆಯಾಗಲು ಇಲ್ಲಿದೆ ಟಿಪ್ಸ್.
ಕ್ಯಾಸ್ಟರ್ ಆಯಿಲ್ : ಹರಳೆಣ್ಣೆ ಮತ್ತು ಆಲಿವ್ ಆಯಿಲ್ ಮಿಕ್ಸ್ ಮಾಡಿ ಇದರಿಂದ ಎದೆಯ ಮೇಲೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಆರಾಮ ಸಿಗುತ್ತದೆ.
ಬಿಸಿ ನೀರಿನಿಂದ ಮಸಾಜ್ : ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಸ್ತನಗಳ ಮೇಲೆ ಇಡಿ. ಈ ರೀತಿ ಹತ್ತು ನಿಮಷಗಳ ಕಾಲ ಮೃದುವಾಗಿ ಒತ್ತುತ್ತಿದ್ದರೆ ನೋವು ನಿವಾರಣೆಯಾಗುತ್ತದೆ.
ಮಂಜುಗಡ್ಡೆಯ ಪ್ಯಾಕ್ : ಒಂದು ಬಟ್ಟೆಯಲ್ಲಿ ಕೆಲವು ಐಸ್ ಕ್ಯೂಬ್ ತೆಗೆದುಕೊಂಡು ಎದೆಯ ಮೇಲೆ ಇಟ್ಟು ಮೃದುವಾಗಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ
ಈ ಸಮಯದಲ್ಲಿ ತಿನ್ನಬೇಕಾದ ಆಹಾರಗಳು
ಪಿರಿಯಡ್ಸ್ ವೇಳೆ ಎದೆ ನೋವು ಇದ್ದಲ್ಲಿ ಪೌಷ್ಠಿಕ ಆಹಾರ ತಿನ್ನಿ. ಇದರೊಂದಿಗೆ ಸೋಂಪು, ಬಾಳೆಹಣ್ಣು ಅಥವಾ ಎಳನೀರು ಸೇವಿಸಿದರೆ ಸ್ತನಗಳ ನೋವು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ