ಗರ್ಭಾವಸ್ಥೆಯಲ್ಲಿ ಕಂಡುಬರುವ ತಲೆನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಶುಕ್ರವಾರ, 27 ನವೆಂಬರ್ 2020 (05:50 IST)
ಬೆಂಗಳೂರು : ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ. ಇದರಿಂದ ಅನೇಕ ರೋಗ ಲಕ್ಷಣಗಳು ಕಂಡುಬರುತ್ತದೆ. ಅದರಲ್ಲಿ ತಲೆನೋವು ಕೂಡ ಒಂದು. ಇದಕ್ಕೆ ಔಷಧಿಗಳನ್ನು ಸೇವಿಸುವ ಬದಲು ತಲೆನೋವನ್ನು ನಿವಾರಿಸಲು ಈ ಸಲಹೆಯನ್ನು ಪಾಲಿಸಿ.

ಗರ್ಭಿಣಿಯರು ತಲೆನೋಯುತ್ತಿರುವ ಪ್ರದೇಶದಲ್ಲಿ 10 ನಿಮಿಷಗಳ ಬೆಚ್ಚಗಾಗಿಸಿ ಇಲ್ಲವೇ ತಣ್ಣಗಾಗಿಸಿ. ಅದಕ್ಕಾಗಿ ತಲೆ ಸ್ನಾನ ಮಾಡಿ. ಇದರಿಂದ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ತಲೆನೋವು ಕಡಿಮೆಯಾಗುತ್ತದೆ.

ಯೋಗ, ಈಜುವುದು, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು, ದಿನವಿಡೀ ಸಾಕಷ್ಟು ನೀರನ್ನು ಕುಡಿಯುವುದು, ವಿಶ್ರಾಂತಿ ಪಡೆಯುವುದು ಮತ್ತು ತಲೆಗೆ ಮಸಾಜ್ ಮಾಡುವುದರಿಂದಲೂ ಕೂಡ ತಲೆನೋವು ನಿವಾರಣೆಯಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ