ಮನೆಯಲ್ಲೇ ಮಾಡಬಹುದಾದ ಆಯುರ್ವೇದಿಕ್ ನ್ಯಾಚುರಲ್ ಫೇಸ್ ಬ್ಲೀಚ್

ಸೋಮವಾರ, 15 ಆಗಸ್ಟ್ 2016 (09:37 IST)
ಅಂದವಾಗಿ ಕಾಣಿಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆರೋಗ್ಯವಂತ ತ್ವಚೆಗಾಗಿ ದುಬಾರಿ ಬೆಲೆಯ ಬ್ಲೀಚ್, ಫೇಸಿಯಲ್ ಮೋರೆ ಹೋಗುವುದು ಸಾಮಾನ್ಯ. ಇಲ್ಲೊಂದು ಸಿಂಪಲ್ ಸಲ್ಯೂಷನ್ ಇದೆ. ನಿಮ್ಮ ತ್ವಚೆಯ ಗುಣಮಟ್ಟ ಉತ್ತಮಗೊಳಿಸಲು ನೀವೂ ಮನೆಯಲ್ಲೇ ಬ್ಲೀಚ್ ಮಾಡಬಹುದು. 
ಪಪ್ಪಾಯಾ, ನಿಂಬೆಹಣ್ಣು, ಜೇನುತುಪ್ಪ ಫೇಸ್ ಪ್ಯಾಕ್ ನಿಮಗಾಗಿ.. 

ಪದಾರ್ಥಗಳು 
ಪಪ್ಪಾಯಿ 4 ಕಪ್‌
1 ಟೇಬಲ್ ಸ್ಪೂನ್ ಜೇನು
1 ಚಮಚಾ ನಿಂಬೆರಸ 
 
ಪಪ್ಪಾಯಿ ಬೆರೆಸಿ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.. ಮುಖ ಹಾಗೂ ಕುತ್ತಿಗೆಗೆ ಪೇಸ್ಟ್ ಹಚ್ಚಿಕೊಂಡು ಬಳಿಕ 30 ನಿಮಿಷಗಳ ಕಾಲ ಬಿಡಿ.. ಆಮೇಲೆ ಬೆಚ್ಚಗಿನ ನೀರಿನಿಂದ ತೊಳೆಯಿರಿ.. ಆ ಬಳಿಕ ಆರ್ಯುವೇದಿಕ್ ನ್ಯಾಚುರಲ್ ಫೇಸ್ ಪ್ಯಾಕ್ ನಿಮ್ಮ ಮೃದುವಾದ ಚರ್ಮ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
 
 
ಓಟ್ಸ್ ಹಿಟ್ಟು ಹಾಗೂ ಟೆಮೆಟೋ ಫೇಸ್ ಪ್ಯಾಕ್

ಪದಾರ್ಥಗಳು
2 ಟೇಬಲ್ ಸ್ಪೂನ್ ಓಟ್ಸ್ ಹಿಟ್ಟು
1 ಟೇಬಲ್ ಸ್ಪೂನ್ ಟೊಮೆಟೋ ರಸ

ಎರಡು ಪದಾರ್ಥಗಳಿಂದ ಪೇಸ್ಟ್ ತಯಾರಿಸಿಕೊಳ್ಳಿ ಆಮೇಲೆ ಮುಖಕ್ಕೆ ಹಚ್ಚಿಕೊಳ್ಳಿ... ಅರ್ಧಗಂಟೆ ಬಳಿಕ ನೀರಿನಲ್ಲಿ ಮುಖವನ್ನು ತೊಳೆಯಿರಿ... 
 
ಇದರಿಂದ ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಾಗುತ್ತದೆ. ತ್ವಚೆಗೆ ರಕ್ಷಣೆ ನೀಡಿದಂತಾಗುತ್ತದೆ. ಅಲ್ಲದೇ ಮನೆಯಲ್ಲೇ ಇದನ್ನು ಬಳಸುವುದರಿಂದ ಹಣ ವ್ಯಯಮಾಡುವುದು ತಪ್ಪುತ್ತದೆ. ಮನೆಯಲ್ಲೇ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಫೇಸ್ ಬ್ಲೀಚ್ ಮಾಡಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

ವೆಬ್ದುನಿಯಾವನ್ನು ಓದಿ