ಬೆಂಗಳೂರು: ಇಂದಿನ ಒತ್ತಡದ ಜಗತ್ತಿನಲ್ಲಿ ಚಿಕ್ಕ ವಯಸ್ಸಿಗೇ ರಕ್ತದೊತ್ತಡ, ಮಧುಮೇಹದಂತಹ ದೀರ್ಘಕಾಲದ ಖಾಯಿಲೆಗಳು ಬಂದುಬಿಡುತ್ತವೆ. ರಕ್ತದೊತ್ತಡ ಅತ್ಯಂತ ಅಪಾಯಕಾರಿಯಾಗಿದ್ದು, ಇದನ್ನು ಒಂದು ಜ್ಯೂಸ್ ನಿಂದಲೇ ನಿಯಂತ್ರಿಸಬಹುದು.
ರಕ್ತದೊತ್ತಡಕ್ಕೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳಲೇಬೇಕಾಗುತ್ತದೆ. ಕೇವಲ ಔಷಧಿಯೊಂದರಿಂದಲೇ ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ಆಹಾರ, ಜೀವನ ಶೈಲಿಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯಕರ ಜೀವನ, ಆಹಾರ ಶೈಲಿಯಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.
ರಕ್ತದೊತ್ತಡ ನಿಭಾಯಿಸಲು ನಮಗೆ ನಾವು ದೈನಂದಿನವಾಗಿ ಬಳಸುವ ತರಕಾರಿಗಳೇ ಸಹಾಯ ಮಾಡುತ್ತವೆ. ನಾವು ಹೆಚ್ಚಾಗಿ ಬಳಕೆ ಮಾಡುವ ನವಿಲುಕೋಸಿನಿಂದಲೇ ರಕ್ತದೊತ್ತಡ ನಿಯಂತ್ರಿಸಬಹುದು. ನವಿಲುಕೋಸು ನೀರಿನಂಶ ಸಾಕಷ್ಟಿರುವ ತರಕಾರಿಯಾಗಿದೆ. ಇದನ್ನು ಹಾಗೆಯೇ ಹಸಿಯಾಗಿ ತಿನ್ನುವುದೂ ರಕ್ತದೊತ್ತಡ ನಿರ್ವಹಣೆಗೆ ಒಳ್ಳೆಯದು.
ಇದಲ್ಲದೇ ಹೋದರೆ ನವಿಲುಕೋಸಿನ ರಸ ತೆಗೆದು ಅದನ್ನು ಸೋಸಿಕೊಂಡು ಪ್ರತಿನಿತ್ಯ ಜ್ಯೂಸ್ ನ ರೂಪದಲ್ಲಿ ಸೇವಿಸುವುದರಿಂದಲೂ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದು ನಾವು ಮನೆಯಲ್ಲಿಯೇ ಸಿಂಪಲ್ ಆಗಿ ಮಾಡಬಹುದಾದ ಪರಿಹಾರವಾಗಿದೆ.