ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Krishnaveni K

ಶನಿವಾರ, 20 ಏಪ್ರಿಲ್ 2024 (12:03 IST)
ಬೆಂಗಳೂರು: ಪ್ರತಿಯೊಬ್ಬರಿಗೂ ಕೂದಲು ಸಂರಕ್ಷಣೆಯೇ ದೊಡ್ಡ ತಲೆನೋವಾಗಿರುತ್ತದೆ. ಅದರಲ್ಲೂ ಈ ಬೇಸಿಗೆಯಲ್ಲಿ ಕೂದಲಿನಲ್ಲಿ ಕೆಸರಾಗುವುದು, ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿರುತ್ತದೆ. ಇದಕ್ಕೆ ತೆಂಗಿನ ಹಾಲು ಬಳಸಿ ರೆಸಿಪಿಯೊಂದನ್ನು ಹೇಳುತ್ತೇವೆ ಮಾಡಿ ನೋಡಿ.

ತೆಂಗಿನ ಹಾಲಿನಲ್ಲಿ ಪೋಷಕಾಂಶ ಸಮೃದ್ಧವಾಗಿರುವುದು ಇದು ಕೂದಲು ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತದೆ. ಕೂದಲು ಬೆಳವಣಿಗೆ, ತಲೆಹೊಟ್ಟಿನ ಸಮಸ್ಯೆ, ಕೂದಲು ಸೀಳುವಿಕೆ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಿ ಕೂದಲುಗಳಿಗೆ ಕಾಂತಿ ನೀಡುವುದಲ್ಲದೆ ಸಮೃದ್ಧವಾಗಿ ಬೆಳೆಯುವಂತೆ ಮಾಡುತ್ತದೆ.

ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ.

ತೆಂಗಿನ ಹಾಲು ಮತ್ತು ನೆನೆಸಿದ ಮೆಂತೆ ಕಾಳನ್ನು ಅರೆದು ಪೇಸ್ಟ್ ಮಾಡಿಕೊಳ್ಳಿ.
ಈ ಪೇಸ್ಟ್ ನ್ನು ಕೂದಲಿನ ಬುಡದವರೆಗೆ ತಾಕುವಂತೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
ಸುಮಾರು 30 ನಿಮಿಷ ಇದೇ ರೀತಿ ಕೂದಲುಗಳನ್ನು ಬಿಡಿ.
ಬಳಿಕ ಕೊಂಚವೇ ಶ್ಯಾಂಪೂ ಬಳಸಿ ಹದ ಬಿಸಿ ನೀರಿನಿಂದ ಕೂದಲು ತೊಳೆದುಕೊಳ್ಳಿ.
ಇದೇ ರೀತಿ ನಿಯಮಿತವಾಗಿ ಮಾಡುತ್ತಿರಬೇಕು.
ಇದರಿಂದ ಕೂದಲುಗಳಿಗೆ ಹೊಸ ಕಾಂತಿ ಬರುವುದಲ್ಲದೆ ಸೊಂಪಾಗಿ ಬೆಳೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ