ಅಪೆಂಡಿಸೈಟಿಸ್ ಸಮಸ್ಯೆಯೇ? ಆರಂಭ ಹಂತದಲ್ಲಿ ಮನೆಯಲ್ಲೇ ಮಾಡಬಹುದಾದ ಮದ್ದು

ಸೋಮವಾರ, 9 ಜನವರಿ 2017 (13:52 IST)
ಬೆಂಗಳೂರು: ಅಪೆಂಡಿಸೈಟಿಸ್ ಅಥವಾ ತೀವ್ರ ತರದ ಹೊಟ್ಟೆ ನೋವು ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ. ನಾವು ತಿನ್ನುವ ಆಹಾರ, ಅಭ್ಯಾಸಗಳು ಇದಕ್ಕೆ ಕಾರಣ. ಆರಂಭದ ಹಂತವಾಗಿದ್ದರೆ ಮನೆಯಲ್ಲೇ ಮಾಡಬಹುದಾದ ಔಷಧವೇನು ಎಂದು ತಿಳಿದುಕೊಳ್ಳೋಣ.


 
ಈ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸದೇ ಬೇರೆ ವಿಧಿಯಿಲ್ಲ. ತೀವ್ರ ನೋವಿದ್ದರೆ ಶಸ್ತ್ರಚಿಕಿತ್ಸೆ ಕೂಡಾ ಅಗತ್ಯವಾಗುತ್ತದೆ. ಆದರೆ ವೈದ್ಯರ ಚಿಕಿತ್ಸೆಯ ಹೊರತಾಗಿಯೂ ನಾವು ಮನೆಯಲ್ಲೇ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.

ಹೆಚ್ಚು ನೀರು ಕುಡಿಯಬೇಕು ಎನ್ನುವುದು ಇದಕ್ಕಿರುವ ಮುಖ್ಯ ಪರಿಹಾರ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಅಪೆಂಡಸೈಟಿಸ್ ರೋಗ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ದಿನಕ್ಕೆ 2-3 ಲೀ. ನೀರು ಕುಡಿಯುವುದು ಅತೀ ಅಗತ್ಯ.

ಹಸಿ ಬೆಳ್ಳುಳ್ಳಿಯನ್ನು ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೀವ್ರ ತರದ ಹೊಟ್ಟೆ ನೋವು ನಿವಾರಿಸಬಹುದು. ಇದು ಅಸಿಡಿಟಿ ಸಮಸ್ಯೆ ಇರುವವರಿಗೂ ಉತ್ತಮ. ಬೆಳ್ಳುಳ್ಳಿ ವಾಸನೆ ಇಷ್ಟವಿಲ್ಲದವರು, ಶುಂಠಿ ಸೇವಿಸಬಹುದು. ಪ್ರತಿದಿನ ಸೇವಿಸುವ ಚಹಾಕ್ಕೆ ಸ್ವಲ್ಪ ಶುಂಠಿ ಸೇರಿಸಿಕೊಂಡು ಸೇವಿಸಿ.

ಮೆಂತ್ಯ ದೇಹಕ್ಕೆ ತಂಪು ನೀಡುತ್ತದೆ. ಮೆಂತ್ಯದ ಕಷಾಯ ಮಾಡಿ ಕುಡಿಯುವುದು ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ. ಇದು ಕಹಿಯೆನಿಸಿದರೆ, ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ರಸ ಸೇವಿಸಬಹುದು. ಇನ್ನು ಹರಳೆಣ್ಣೆಯನ್ನು ನೋವಿರುವ ಜಾಗಕ್ಕೆ ಮಸಾಜ್ ಮಾಡುವುದೂ ಉತ್ತಮ ಮನೆ ಮದ್ದು. ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ