ಮಳೆಗಾಲದಲ್ಲಿ ಉಂಟಾಗುವ ಶೀತ, ಗಂಟಲು ನೋವಿಗೆ ಇಲ್ಲಿದೆ ಮನೆಮದ್ದು

ಬುಧವಾರ, 14 ಆಗಸ್ಟ್ 2019 (08:59 IST)
ಬೆಂಗಳೂರು : ಮಳೆಗಾಲ ಶುರುವಾಯ್ತೆಂದರೆ ಶೀತ ,ಗಂಟಲು ನೋವು ಇತ್ಯಾದಿ ಕಾಯಿಲೆಗಳು ಶುರುವಾಗುತ್ತದೆ. ಪದೇ ಪದೇ ಕಾಯಿಲೆ ಬೀಳುವುದರಿಂದ ದೇಜದ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಶೀತ, ಗಂಟಲು ನೋವಿನಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.




ಸಾಮಾನ್ಯವಾಗಿ ನೆಗಡಿ ಗಂಟಲು ಕೆರೆತಕ್ಕೆ ತುಳಸಿ, ಅರಿಶಿಣ, ಲವಂಗ ಕಂದು ಸಕ್ಕರೆ ತುಂಬಾ ಉತ್ತಮ. ಇವುಗಳಲ್ಲಿರುವ ಔಷಧೀಯ ಗುಣಗಳು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿವೆ.


ಕಂದು ಸಕ್ಕರೆ - 1 ಟೇಬಲ್ ಸ್ಪೂನ್

ಲವಂಗ - 4 -5

ತುಳಸಿ -5-6

ಅರಿಶಿಣ - 1 ಟೇಬಲ್ ಸ್ಪೂನ್

ಇವೆಲ್ಲಾ ಪದಾರ್ಥಗಳನ್ನು ಕುದಿಸಿ ಒಂದು ಕಪ್ ಗೆ ಸೋಸಿ ಬಿಸಿಯಿರುವಾಗಲೇ ಕುಡಿಯಿರಿ. ದಿನಕ್ಕೆ ಒಂದೆರಡು ಬಾರಿ ಸೇವಿಸಿದರೆ  ಶೀತ ಹಾಗೂ ಗಂಟಲು ಕೆರೆತ ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ