ಮಹಿಳೆಯರಿಗೆ ಪ್ರತಿ ತಿಂಗಳೂ ಕಾಡುವ ಋತುಚಕ್ರದ ಅವಧಿಯಲ್ಲಿ ಕೆಳಹೊಟ್ಟೆ ನೋವು ಬಹುತೇಕ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ. ತಾಳಲಾರದ ಹೊಟ್ಟೆ ನೋವು ಹಲವು ಮಹಿಳೆಯರನ್ನು ಹೈರಾಣಿಸುತ್ತದೆ. ಇಂತಹ ಸಂದರ್ಬದಲ್ಲಿ ಹೆಚ್ಚಿನ ಮಹಿಳೆಯರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಮಾತ್ರೆಗಳು ತಾತ್ಕಾಲಿಕವಾಗಿ ನೋವನ್ನ ನಿವಾರಿಸುತ್ತವೆಯಾದರು ದೀರ್ಘ ಕಾಲ ಮಾತ್ರೆಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪಾರಿನಾಮ ಬೀರುವ ಸಾಧ್ಯತೆಯಿರುತ್ತದೆ.
* ಸಿಹಿಗುಂಬಳ ಇಲ್ಲವೇ ಚೀನಿಕಾಯಿ:
ನೈಸರ್ಗಿಕವಾಗಿ ದೊರಕುವ ಮನೆಮದ್ದುಗಳಲ್ಲಿ ಸಿಹಿಗುಂಬಳ ಅಥವಾ ಚೀನಿಕಾಯಿ ಕೂಡ ಒಂದು. ಸಿಹಿಗುಂಬಳ ಅಥವಾ ಚೀನಿಕಾಯಿಯ ತಿರುಳನ್ನು ತೆಗೆದುಕೊಂಡು ರೂಮ್ ಟೆಂಪರೇಚರ್ ನಲ್ಲಿ ಸ್ವಲ್ಪ ಒಣಗಲು ಬಿಡಿ. ನಂತರ ಅದನ್ನು ಮಿಕ್ಸಿ ಮಾಡಿ, ಸಕ್ಕರೆ ಇಲ್ಲವೇ ಬೆಲ್ಲ ಮತ್ತು ಹಾಲು ಅಥವಾ ಸಕ್ಕರೆ ಮತ್ತು ಮೊಸರು ಸೇರಿಸಿ ಪ್ರತಿದಿನ ಸೇವಿಸೋದರಿಂದ ಋತುಚಕ್ರದ ಸಂದರ್ಬದಲ್ಲಿ ಅತಿಯಾದ ರಕ್ತಸ್ರಾವದಿಂದ ಆಗುವ ಹೊಟ್ಟೆನೋವು, ಸುಸ್ತನ್ನು ನಿವಾರಿಸಬಹುದು.