ವಿವಿಧ ಬೇನೆಗಳಿಗೆ ಮನೆಯಲ್ಲೇ ಮದ್ದು ಮಾಡಿ

ಭಾನುವಾರ, 1 ಜನವರಿ 2017 (07:31 IST)
ಬೆಂಗಳೂರು:  ದಿನ ನಿತ್ಯದ ಜೀವನದಲ್ಲಿ ಒಂದಲ್ಲಾ ಒಂದು ಗಾಯಗಳು, ನೋವುಗಳು ಸಾಮಾನ್ಯ. ಗಾಯವಾದ ತಕ್ಷಣ ಮುಲಾಮು ಹಚ್ಚುವುದು ಸಾಮಾನ್ಯ. ಮುಲಾಮಿನ ಸಹಾಯವಿಲ್ಲದೆ ಗಾಯ ಗುಣಪಡಿಸುವಂತಹ ಮನೆ ಔಷಧಗಳು ಯಾವುದೆಲ್ಲಾ ನೋಡೋಣ.


ಅಲ್ಯುವೀರಾ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದನ್ನು ಮುಖದ ಮೊಡವೆಗಾಗಿ ಹಚ್ಚುವುದು ನಮಗೆಲ್ಲಾ ಗೊತ್ತು. ಈ ಅಲ್ಯುವಿರಾವನ್ನು ನೋವು ನಿವಾರಕವಾಗಿಯೂ ಬಳಸಬಹುದು.

ಅಲ್ಯುವಿರಾದ ಎಲೆಯನ್ನು ತೆಳುವಾಗಿ ಕತ್ತರಿಸಿ, ಅದರ ಅಂಟನ್ನು ನೋವಿರುವ ಜಾಗಕ್ಕೆ ಕಟ್ಟಿಕೊಂಡರೆ ನೋವು ಬೇಗ ನಿವಾರಣೆಯಾಗುತ್ತದೆ. ಅಲ್ಯುವಿರಾದ ರಸ ನೀಡಿ ಮಕ್ಕಳಲ್ಲಿರುವ ಕಫ ತೆಗೆಯುವುದಕ್ಕೂ ಬಳಸುತ್ತಾರೆ.

ಕಾಳುಮೆಣಸಿನ ಎಲೆಯನ್ನೂ ನೋವು ನಿವಾರಕವಾಗಿ ಬಳಸಬಹುದು. ನೋವಿರುವ ಜಾಗಕ್ಕೆ ಎಳ್ಳೆಣ್ಣೆ ಹಚ್ಚಿ ಕಾಳು ಮೆಣಸಿನ ಎಲೆಯನ್ನು ಬಾಡಿಸಿ ಕಟ್ಟಿಕೊಳ್ಳುವುದು ಉತ್ತಮ ಮನೆ ಔಷಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ