ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳು ನೆನೆಸಿ ಅದರ ನೀರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಅದು ಯಾವುದೆಲ್ಲಾ ನೋಡೋಣ.
ನಿಮಗೆ ಅಸಿಡಿಟಿ ಮತ್ತು ಉಷ್ಣ ಸಂಬಂಧೀ ಸಮಸ್ಯೆಗಳಿದ್ದರೆ ಬೆಳಗ್ಗೆ ಉಪಹಾರಕ್ಕೆ ಮೊದಲು ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತೆ ನೆನೆಸಿದ ನೀರು ಕುಡಿಯುವುದು ಒಳ್ಳೆಯದು.
ಅಲ್ಲದೆ, ಶೀತ, ಕಫ, ಕೆಮ್ಮಿನಂತಹ ಶೀತ ಸಂಬಂಧೀ ಸಮಸ್ಯೆಯಿದ್ದರೂ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೆಂತೆ ನೆನೆಸಿದ ನೀರನ್ನು ಸೇವಿಸುವುದು ಒಳ್ಳೆಯದು. ಇನ್ನು ಹಾಲೂಡಿಸುವ ತಾಯಂದಿರಿಗೆ ಹಾಲು ಹೆಚ್ಚಿಸುವುದಕ್ಕೆ ಮೆಂತೆ ನೀರು ಸೇವನೆ ಉತ್ತಮ. ಅಷ್ಟೇ ಅಲ್ಲದೆ, ಮಧುಮೇಹಿಗಳಿಗೂ ರಕ್ತದ ಅಂಶ ನಿಯಂತ್ರಣದಲ್ಲಿಡಲು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ