ಶ್ವಾಸಕೋಶವನ್ನು ಶುದ್ಧೀಕರಿಸಲು ಈ ಮನೆಮದ್ದನ್ನು ಸೇವಿಸಿ

ಭಾನುವಾರ, 1 ನವೆಂಬರ್ 2020 (07:10 IST)
ಬೆಂಗಳೂರು : ವಾತಾವರಣದಲ್ಲಿರುವ ಧೂಳು ನಮ್ಮ ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಇದರಿಂದ ಶ್ವಾಸಕೋಶದಲ್ಲಿ  ಸೋಂಕು ಉಂಟಾಗಿ ಕಫ ತುಂಬಿಕೊಳ್ಳುತ್ತಿರುತ್ತದೆ. ಆದಕಾರಣ ಶ್ವಾಸಕೋಶವನ್ನು ಈ ರೀತಿಯಾಗಿ ಶುದ್ಧೀಕರಿಸಬೇಕು.

ಅಧ್ಯಯನದ ಪ್ರಕಾರ ಶ್ವಾಸಕೋಶದ ಶುದ್ಧೀಕರಣಕ್ಕೆ ಶುಂಠಿ ಸಹಕಾರಿಯಂತೆ. ಆದಕಾರಣ ಪ್ರತಿದಿನ ಶುಂಠಿ ಚಹಾವನ್ನು ಸೇವಿಸಬೇಕಂತೆ. 1ಕಪ್ ನೀರಿಗೆ 1 ಚಮಚ ತುರಿದ ಹಸಿಶುಂಠಿ ಸೇರಿಸಿ 10 ನಿಮಿಷ ಕುದಿಸಿ. ಅದು ತಣ್ಣಗಾದ ಮೇಲೆ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ. ಇದನ್ನು ಸೇವಿಸಿ. ಹೀಗೆ ಪ್ರತಿದಿನ ಇದನ್ನು ಸೇವಿಸಿದರೆ ಶ್ವಾಸಕೋಶ ಸಂಬಂಧಿ ಕಾಯಿಲೆ ದೂರವಾಗುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ