ಬಿಸಿನೀರಿನಲ್ಲಿ ಪಾದ ಅದ್ದಿದರೆ ಏನೆಲ್ಲಾ ಪ್ರಯೋಜನ ಗೊತ್ತಾ?

ಶುಕ್ರವಾರ, 3 ನವೆಂಬರ್ 2017 (08:37 IST)
ಬೆಂಗಳೂರು: ಚಳಿಗಾಲ ಬಂತೆಂದರೆ ಪಾದಗಳ ಸಂರಕ್ಷಣೆಗೆ ಎಷ್ಟು ಮಹತ್ವ ಕೊಟ್ಟರೂ ಸಾಲದು. ಪ್ರತಿ ನಿತ್ಯ ಐದು ನಿಮಿಷ ಪಾದಗಳನ್ನು ಬಿಸಿನೀರಿನಲ್ಲಿ ಅದ್ದಿಡಿ. ಇದರಿಂದ ಎಷ್ಟೊಂದು ಲಾಭ ಗೊತ್ತಾ?

 
ಹಿಮ್ಮಡಿ ಒಡೆತ
ಚಳಿಗಾಲದಲ್ಲಿ ಪಾದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣುವುದನ್ನು ತಪ್ಪಿಸಲು ಬಿಸಿ ನೀರಿನಲ್ಲಿ ಹದಿನೈದು ನಿಮಿಷ ಅದ್ದಿಡಿ. ಹೀಗೆ ಮಾಡುವುದರಿಂದ ಪಾದ ಅಸಹ್ಯವಾಗಿ ಕಾಣುವುದು ತಪ್ಪುತ್ತದೆ.

ತಲೆನೋವು
ಪಾದಗಳನ್ನು ಬಿಸಿ ನೀರಿನಲ್ಲಿ ಅದ್ದಿ ಇಡುವುದರಿಂದ ಪಾದಕ್ಕೆ ಹೆಚ್ಚು  ರಕ್ತ ಸಂಚಾರವಾಗುವುದರಿಂದ ಕತ್ತಿನ ಮತ್ತು ಬೆನ್ನಿನ ಸ್ನಾಯುಗಳು ಸಡಿಲವಾಗುತ್ತದೆ. ಹಾಗಾಗಿ ಒತ್ತಡದಿಂದ ಉಂಟಾದ ತಲೆನೋವು ದೂರವಾಗುತ್ತದೆ.

ನಿದ್ರಾಹೀನತೆ
ರಾತ್ರಿ ಮಲಗುವ ಮುಂಚೆ ಹದಿನೈದು ನಿಮಿಷಗಳ ಕಾಲ ಅದ್ದಿಟ್ಟುಕೊಳ್ಳುವುದರಿಂದ ನಿದ್ರಾ ಹೀನತೆಗೆ ಪರಿಹಾರ ಸಿಗುವುದು.

ಹಿಮ್ಮಡಿ ನೋವು
ಹೆಚ್ಚು ಕೆಲಸ ಮಾಡಿದಾಗ ಪಾದದ ಹಿಮ್ಮಡಿ ನೋವು ಬರುವುದು. ಈ ರೀತಿ ಹಿಮ್ಮಡಿ ನೋವು ಬಂದಾಗ ಪಾದಗಳನ್ನು ಬಿಸಿ ನೀರಿಗೆ ಒಂದೆರಡು ಕಲ್ಲು ಉಪ್ಪು ಹಾಕಿಕೊಂಡು ಅದ್ದಿಕೊಳ್ಳಿ. ಇದರಿಂದ ನೋವು ಪರಿಹಾರವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ