ಸಹಜವಾಗಿ ಹಣ್ಣಾದ ಹಾಗೂ ರಾಸಾಯನಿಕ ಬಳಸಿ ಹಣ್ಣಾದ ಮಾವಿನ ಹಣ್ಣಿನ ವ್ಯತ್ಯಾಸ ತಿಳಿಯೋದು ಹೇಗೆ ಗೊತ್ತಾ?

ಸೋಮವಾರ, 27 ಆಗಸ್ಟ್ 2018 (12:46 IST)
ಬೆಂಗಳೂರು : ಸೀಸನ್‌ನಲ್ಲಿ ನಮಗೆ ಅಧಿಕವಾಗಿ ಲಭಿಸುವ ಹಣ್ಣುಗಳಲ್ಲಿ ಮಾವಿನಹಣ್ಣು ಸಹ ಒಂದು. ಇವನ್ನು ತಿನ್ನುವುದರಿಂದ ನಮಗೆ ಅನೇಕ ಲಾಭಗಳಿವೆ. ಆದರೆ ಬಹಳಷ್ಟು ಮಂದಿ ವ್ಯಾಪಾರಿಗಳು ಮಾವಿನಹಣ್ಣುಗಳನ್ನು ಗಿಡದಲ್ಲೇ ಹಣ್ಣಾಗಲು ಬಿಡದೆ  ರಾಸಾಯನಿಕಗಳನ್ನು ಹಾಕಿ ಹಣ್ಣಾಗಿಸುತ್ತಿದ್ದಾರೆ. ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಆದರೆ ಮಾರುಕಟ್ಟೆಯಲ್ಲಿ ನಮಗೆ ಲಭಿಸುವ ಮಾವಿನ ಹಣ್ಣುಗಳನ್ನು ಸಹಜವಾಗಿ ಹಣ್ಣಾಗಿಸಿದ್ದಾರಾ? ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ್ದಾರಾ? ಎಂದು ತಿಳಿದುಕೊಳ್ಳಬಹುದು.


*ಬಣ್ಣ : ಸಹಜವಾಗಿ ಹಣ್ಣಾದ ಮಾವು ಸಂಪೂರ್ಣ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣಿನ ಮೇಲೆ ಅಲ್ಲಲ್ಲಿ ಎಲೆಹಸಿರು ಬಣ್ಣದ ಪ್ಯಾಚ್‌ಗಳು ಇರುತ್ತವೆ.


*ರುಚಿ : ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ತಿಂದರೆ ಸಿಹಿಯ ಜತೆಗೆ ರುಚಿ ಕಡಿಮೆ ಇರುತ್ತದೆ. ಇದರ ಜತೆಗೆ ಹಣ್ಣನ್ನು ತಿನ್ನುವಾಗ ನಾಲಿಗೆ ಉರಿದಂತೆ ಅನ್ನಿಸುತ್ತದೆ. ಯಾಕೆಂದರೆ ಅದರಲ್ಲಿ ಇನ್ನೂ ರಾಸಾಯಾನಿಕ ಉಳಿದಿದ್ದರೆ ಅದು ನಮ್ಮ ನಾಲಿಗೆಗೆ ತಾಕಿಗದಾಗ ಉರಿ ಅನ್ನಿಸುತ್ತದೆ.


*ತಿರುಳು : ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನ ತಿರುಳು ಗಾಢ ಬಣ್ಣದಲ್ಲಿರುತ್ತದೆ. ಅದೇ ರೀತಿ ಸಹಜವಾಗಿ ಹಣ್ಣಾದ ಮಾವಿನ ತಿರುಳು ಹಳದಿ, ಕೆಂಪು ಬಣ್ಣಗಳಲ್ಲಿರುತ್ತದೆ.


*ಜ್ಯೂಸ್ : ಸಹಜವಾಗಿ ಹಣ್ಣಾದ ಮಾವಿನಿಂದ ಜ್ಯೂಸ್ ತೆಗೆದರೆ ಹೆಚ್ಚು ಬರುತ್ತದೆ. ಅದೇ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನಿಂದ ಜ್ಯೂಸ್‌ ತೆಗೆದರೆ ಹೆಚ್ಚು ಬರಲ್ಲ.


*ಹಣ್ಣು : ಸಹಜವಾಗಿ ಹಣ್ಣಾದ ಮಾವಿನ ಹಣ್ಣು ನೋಡಲು ಸಾಮಾನ್ಯವಾಗಿ ಇರುತ್ತದೆ. ಆದರೆ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ಹೊಳೆಯುತ್ತಾ ಆಕರ್ಷಕವಾಗಿ ಕಾಣಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ