ವಿಟಮಿನ್ ಸಿ ದೇಹ ಸೇರಲು ಸುಲಭ ಟ್ರಿಕ್

ಮಂಗಳವಾರ, 31 ಆಗಸ್ಟ್ 2021 (12:22 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕೊರೋನಾದಂತಹ ಆರೋಗ್ಯ ಸಮಸ್ಯೆಯಿಂದ ಪಾರಾಗಲು ದೇಹಕ್ಕೆ ವಿಟಮಿನ್ ಸಿ ಅಂಶ ಅತೀ ಅಗತ್ಯ. ರೋಗ ನಿರೋಧಕ ಶಕ್ತಿ ನೀಡುವ ವಿಟಮಿನ್ ಸಿ ಅಂಶ ಅತೀ ಹೆಚ್ಚು ಇರುವುದು ಹುಳಿ ಅಂಶವಿರುವ ನಿಂಬೆ ಹಣ್ಣು, ಚೆರ್ರಿ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ತರಕಾರಿ, ಹಣ್ಣುಗಳಲ್ಲಿ.


ಕೆಲವರಿಗೆ ಹುಳಿ ಅಂಶ ನೇರವಾಗಿ ಸೇವಿಸಲು ಇಷ್ಟವಿಲ್ಲದೇ ಹೋಗಬಹುದು. ಹಾಗಿದ್ದಾಗ ವಿಟಮಿನ್ ಸಿ ಅಂಶ ನಮ್ಮ ದೇಹ ಸೇರಬೇಕೆಂದರೆ ನಾವು ಬಳಸುವ ಸಾಮಾನ್ಯ ರಸಂ, ದಾಲ್, ವೆಜಿಟೇಬಲ್ಸ್ ಫ್ರೈ, ಸಲಾಡ್ ಗೆ ಕೊಂಚ ನಿಂಬೆ ರಸವನ್ನು ಹಾಕಿಕೊಂಡು ಸೇವಿಸಬಹುದು. ದಿನನಿತ್ಯದ ಆಹಾರದಲ್ಲಿ ಈ ರೀತಿ ಕೊಂಚ ಕೊಂಚವೇ ಸೇವಿಸುತ್ತಿದ್ದರೂ ವಿಟಮಿನ್ ಸಿ ಅಂಶ ನಮ್ಮ ದೇಹಕ್ಕೆ ಸಿಕ್ಕೇ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ