ಪುರುಷ ಸಂಗಾತಿಯನ್ನು ರೊಮ್ಯಾನ್ಸ್ ಗೆ ಸೆಳೆಯಲು ಇಲ್ಲಿದೆ ಉಪಾಯ!

ಭಾನುವಾರ, 5 ಆಗಸ್ಟ್ 2018 (09:03 IST)
ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಬಯಕೆ ಇದ್ದರೂ ಬಾಯಿ ಬಿಟ್ಟು ತನ್ನ ಸಂಗಾತಿ ಬಳಿ ಕೇಳಲು ಸಂಕೋಚವಿದ್ದರೆ ಕೆಲವು ಸಂಜ್ಞೆಗಳ ಮೂಲಕ ಆತನನ್ನು ಮಧು ಮಂಚಕೆ ಕರೆಯಬಹುದು. ಅದಕ್ಕೊಂದಷ್ಟು ಟಿಪ್ಸ್ ಇಲ್ಲಿದೆ ನೋಡಿ!

ಕೆಣಕುತಿದೆ ನಿನ್ನ ಕಣ್ಣೋಟ!
ಬೇಕೆಂದೇ ಆತನ ತುಂಟತನವನ್ನು ಹೊಗಳಿ. ಏನು ನನ್ನ ರೊಮ್ಯಾನ್ಸ್ ಗೆ ಕೆಣಕುತ್ತಿದ್ದೀಯಾ ಎಂದು ಕೇಳಿ. ಇದರಿಂದ ಆತನಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚುತ್ತದೆ.

ಹೊಗಳಿಕೆ
ಆತ ಯಾವುದೇ ಡ್ರೆಸ್ ನಲ್ಲಿರಲಿ, ನೀನು ತುಂಬಾ ಹಾಟ್ ಆಗಿ ಕಾಣುತ್ತಿದ್ದೀಯಾ ಎಂದು ಹೊಗಳಿಕೆ ನೀಡಿ. ಮಹಿಳೆಯರು ಮಾತ್ರವಲ್ಲ, ಪುರುಷರಿಗೂ ತಮ್ಮ ಸಂಗಾತಿ ತಮ್ಮ ದೇಹ ಸೌಂದರ್ಯ ಹೊಗಳುವುದು ಇಷ್ಟವಾಗುತ್ತದೆ!

ಹಳೆಯ ರೊಮ್ಯಾಂಟಿಕ್ ಕ್ಷಣಗಳು
ಆತನ ಬಳಿ ಕುಳಿತು ಹಳೆಯ ದಿನಗಳಲ್ಲಿ ತಾವು ಕಳೆದ ರೊಮ್ಯಾಂಟಿಕ್ ಕ್ಷಣಗಳನ್ನು ಮೆಲುಕು ಹಾಕಿ. ಇದು ಇಬ್ಬರನ್ನೂ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಫಿಲಂ ತೋರಿಸಿ
ಬೇಕೆಂದೇ ರೊಮ್ಯಾಂಟಿಕ್ ಅಥವಾ ಹಾರರ್ ಮೂವಿ ನೋಡಲು ಕರೆಯಿರಿ. ಸಿನಿಮಾ ಮಧ್ಯೆ ಆತನಿಗೆ ಅಂಟಿ ಕುಳಿತುಕೊಳ್ಳುವುದನ್ನು ಮರೆಯಬೇಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ