ಈ ಆಹಾರ ಸೇವಿಸುತ್ತಿದ್ದರೆ ನಿಮ್ಮ ಹೊಟ್ಟೆ ಕರಗುವುದು ಖಂಡಿತಾ!
ಬುಧವಾರ, 30 ಆಗಸ್ಟ್ 2017 (08:40 IST)
ಬೆಂಗಳೂರು: ದಪ್ಪ ಹೊಟ್ಟೆ ಎಂಬ ಚಿಂತೆಯೇ? ಹೇಗಾದರೂ ಅದನ್ನು ಕರಗಿಸಬೇಕೆಂದು ಕಸರತ್ತು ಮಾಡುತ್ತಿದ್ದೀರಾ? ಅದಕ್ಕೆ ಈ ಆಹಾರ ವಸ್ತುಗಳನ್ನು ನಿತ್ಯವೂ ಸೇವಿಸಿದರೆ ಸಾಕು.
ಓಂ ಕಾಳು
ಓಂ ಕಾಳಿಗೆ ವಿಶಿಷ್ಟ ಸುವಾಸನೆಯಿದೆ. ಇದನ್ನು ಹಲವು ಆರೋಗ್ಯದ ಸಮಸ್ಯೆಗಳಿಗೂ ಬಳಸಲಾಗುತ್ತದೆ. ಉಸಿರಾಟದ ತೊಂದರೆಯಿದ್ದರೆ, ಅಜೀರ್ಣವಾಗಿದ್ದರೆ ಇದು ಒಳ್ಳೆಯದು. ಆದರೆ ಇದು ಬೊಜ್ಜು ಕರಗಿಸುವುದಕ್ಕೂ ರಾಮ ಬಾಣ ಎಂದು ನಿಮಗೆ ಗೊತ್ತಿದೆಯೇ? ಒಂದು ಟೇಬಲ್ ಸ್ಪೂನ್ ಓಂ ಕಾಳುಗಳನ್ನು ಕುದಿಸಿದ ನೀರಿಗೆ ಹಾಕಿಕೊಂಡು ದಿನವಿಡೀ ಕುಡಿಯುತ್ತಿದ್ದರೆ ಹೊಟ್ಟೆ ತೆಳ್ಳಗಾಗಬಹುದು.
ಹೆಸರು ಬೇಳೆ
ಹೆಸರು ಬೇಳೆ ಪಾಯಸ, ಕೋಸಂಬರಿ ಮಾಡುವುದಕ್ಕಷ್ಟೇ ಅಲ್ಲ. ಇದರಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ನಾರಿನಂಶ ಇದ್ದು ಕೊಬ್ಬು ಕರಗಿಸುವ ಗುಣವಿದೆ. ಸಾಕಷ್ಟು ಕ್ಯಾಲೊರಿ ನೀಡುವುದರಿಂದ ಬೇಗನೇ ನಮ್ಮ ಹೊಟ್ಟೆ ತುಂಬುತ್ತದೆ.
ಸೋರೆಕಾಯಿ
ಸೋರೆಕಾಯಿಯಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಪೋಸ್ಪರಸ್ ಮತ್ತು ಪೊಟೇಷಿಯಂ ಹೇರಳವಾಗಿದೆ. ಇದರಲ್ಲಿ ಕೇವಲ 73 ಕ್ಯಾಲೊರಿ ಇದ್ದು ಡಯಟ್ ಗೆ ಹೇಳಿ ಮಾಡಿಸಿದ ತರಕಾರಿ. ಇದರಲ್ಲಿರುವ ವಿಟಮಿನ್ ಗಳು ಬೊಜ್ಜು ಕರಗಿಸಲು ನೆರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ