ಋತುಸ್ರಾವ ಬೇಗ ಆಗಬೇಕಾದರೆ ನೈಸರ್ಗಿಕ ಉಪಾಯಗಳೇನು ಗೊತ್ತಾ?

ಶನಿವಾರ, 11 ಫೆಬ್ರವರಿ 2017 (11:41 IST)
ಬೆಂಗಳೂರು: ಮಹಿಳೆಯರಿಗೆ ಇದೊಂದು ಸಮಸ್ಯೆ. ಸರಿಯಾದ ಸಮಯಕ್ಕೆ ಋತುಸ್ರಾವವಾಗದೇ ಇದ್ದು ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಹೀಗಿರುವಾಗ ಋತುಸ್ರಾವ ಸರಿಯಾದ ಸಮಯಕ್ಕೆ ಆಗಬೇಕೆಂದರೆ ಏನೆಲ್ಲಾ ಮಾಡಬೇಕು?

 
ಋತುಸ್ರಾವ ಬರುವ ಹದಿನೈದು ದಿನಗಳ ಮುಂಚೆ ಪ್ರತಿ ದಿನ ಎರಡು ಅಥವಾ ಮೂರು ಬಾರಿ ಅರಸಿನ ಪುಡಿ ಹಾಕಿದ ನೀರು ಕುಡಿಯುತ್ತಿರಬೇಕು. ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿ ಎಳ್ಳಿನ ನೀರು, ಧನಿಯಾ ಕಾಳಿನ ನೀರು ಕುಡಿದರೂ ಋತುಸ್ರಾವ ಸರಿಯಾದ ಸಮಯಕ್ಕೆ ಆಗಬಹುದು.

ಕ್ಯಾರೆಟ್, ಶುಂಠಿಯನ್ನು ಹಸಿಯಾಗಿ ತಿನ್ನುವುದೂ ಉತ್ತಮ. ಇದಲ್ಲದಿದ್ದರೆ ಹಸಿ ಪಪ್ಪಾಯಿಯನ್ನು ಬಿಡದೇ ತಿನ್ನುವುದರಿಂದ ಋತುಸ್ರಾವ ಬೇಗ ಆಗಬಹುದು. ಒಟ್ಟಾರೆ ಅತಿಯಾದ ಉಷ್ಣ ಅಥವಾ ದೇಹಕ್ಕೆ ತಂಪು ನೀಡುವ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ನೈಸರ್ಗಿಕವಾಗಿ ಬೇಗ ಋತುಸ್ರಾವವಾಗುವಂತೆ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ