ವಾಲ್ನಟ್ಸ್ ಚಿಪ್ ನಿಂದ ಮುಖದ ಹೊಳಪು ಹೆಚ್ಚಿಸಿಕೊಳ್ಳುವುದು ಹೇಗೆ?
ಮಂಗಳವಾರ, 5 ಜನವರಿ 2021 (10:05 IST)
ಬೆಂಗಳೂರು : ವಾಲ್ನಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಚರ್ಮದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ವಾಲ್ನಟ್ ಫೇಸ್ ಸ್ಕ್ರಬ್ ಅತ್ಯಂತ ಪರಿಣಾಮಕಾರಿ ಚರ್ಮದ ಚಿಕಿತ್ಸೆಯಾಗಿದೆ. ಇದು ಸತ್ತ ಚರ್ಮಕೋಶಗಳನ್ನು ನಿವಾರಿಸಿ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮೊಡವೆಗಳು, ಗುಳ್ಳೆಗಳು, ಸೋಂಕುಗಳಿಂದ ಇದು ದೂರವಿರಿಸುತ್ತದೆ.
ಹಾಗಾಗಿ 1ಚಮಚ ವಾಲ್ನಟ್ಸ್ ಚಿಪ್ಪುಗಳನ್ನು ತೆಗೆದುಕೊಂಡು ಒರಟಾಗಿ ಪುಡಿ ಮಾಡಿಕೊಂಡು ಅದಕ್ಕೆ 1 ಚಮಚ ತೆಂಗಿನೆಣ್ಣೆ, ಕೆಲವು ಹನಿ ರೋಸ್ ವಾಟರ್ ಮಿಕ್ಸ್ ಮಾಡಿ ಈ ಸ್ಕ್ರಬ್ ನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ 15 ನಿಮಿಷಗಳ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಚರ್ಮದ ಬಣ್ಣ ಬೆಳ್ಳಗಾಗುತ್ತದೆ. ಇದನ್ನು ವಾರಕ್ಕೊಮ್ಮೆ ಮಾಡಿ.