ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಏನು ಮಾಡಬೇಕು?

ಮಂಗಳವಾರ, 27 ಫೆಬ್ರವರಿ 2018 (08:33 IST)
ಬೆಂಗಳೂರು: ದೇಹಕ್ಕೆ ಹಿಮೋಗ್ಲೋಬಿನ್ ಅಂಶ ತುಂಬಾ ಪ್ರಾಮುಖ್ಯವಾಗಿದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಅಂಶ ಇರಬೇಕೆಂದರೆ ಕೆಲವು ಆಹಾರಗಳನ್ನು ಸೇವಿಸಲೇಬೇಕು.
 

ಕಬ್ಬಿಣದಂಶದ ಆಹಾರ
ಕಬ್ಬಿಣದಂಶ ಹೇರಳವಾಗಿರುವ ಬೀಟ್ ರೂಟ್, ಸೊಪ್ಪು ತರಕಾರಿಗಳು, ನೆಲ್ಲಿಕಾಯಿ, ಮೊಟ್ಟೆ, ದಾಳಿಂಬೆ ಮುಂತಾದ ಆಹಾರಗಳನ್ನು ಹೆಚ್ಚು ಸೇವಿಸಿ.

ವಿಟಮಿನ್ ಸಿ
ಕಿತ್ತಳೆ, ನಿಂಬೆ ಹಣ್ಣು, ನೆಲ್ಲಿಕಾಯಿ,  ಪಪ್ಪಾಯ, ದ್ರಾಕ್ಷಿ ಹಣ್ಣುಗಳನ್ನು ಹೆಚ್ಚು ಸೇವಿಸಿ. ವಿಟಮಿನ್ ಸಿ ಅಂಶ ಆಹಾರದಲ್ಲಿರುವ ಕಬ್ಬಿಣದಂಶವನ್ನು ಬೇಗನೇ ಹೀರಿಕೊಳ್ಳುತ್ತದೆ.

ಫೋಲಿಕ್ ಆಸಿಡ್
ಕೆಂಪು ರಕ್ತಕಣಗಳು ಹೆಚ್ಚು ಉತ್ಪತ್ತಿಯಾಗಬೇಕಾದರೆ ಫೋಲಿಕ್ ಆಸಿಡ್, ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಅದಕ್ಕಾಗಿ ಬಾಳೆಹಣ್ಣು,  ಚಿಕನ್ ಲಿವರ್, ಪಾಲಕ್ ಸೊಪ್ಪಿನಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ