ಶೀತ ಬರುವ ಮೊದಲೇ ತಡೆಗಟ್ಟುವುದು ಹೇಗೆ?

ಮಂಗಳವಾರ, 16 ಅಕ್ಟೋಬರ್ 2018 (09:20 IST)
ಬೆಂಗಳೂರು: ಚಳಿಗಾಲ, ಮಳೆಗಾಲ ಬಂತೆಂದರೆ ನೆಗಡಿಯ ಕಿರಿ ಕಿರಿ ತಪ್ಪಲ್ಲ. ಸಣ್ಣ ಅನಾರೋಗ್ಯವಾದರೂ ವಿಪರೀತ ಕಿರಿ ಕಿರಿ ಕೊಡುವ ಶೀತದಿಂದ ಪಾರಾಗುವುದು ಹೇಗೆ?

ಶೀತ ಬರುವ ಮೊದಲೇ ತಡೆಗಟ್ಟಬೇಕಾದರೆ ಸಾಕಷ್ಟು ವಿಟಮಿನ್ ಡಿ ಅಂಶವನ್ನು ದೇಹಕ್ಕೆ ಒದಗಿಸಬೇಕು. ಆಹಾರ ಮಾತ್ರವಲ್ಲದೆ, ಬೆಳಗಿನ ಸೂರ್ಯನ ಕಿರಣಗಳನ್ನು ಮೈಗೊಡ್ಡುವುದರಿಂದಲೂ  ವಿಟಮಿನ್ ಡಿ ಅಂಶ ದೇಹ ಸೇರುವುದು.

ಇದಲ್ಲದೆ, ಆದಷ್ಟು ನಮ್ಮ ಕೈ, ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಹೊರಗೆ ಹೋಗಿ ಬಂದ ತಕ್ಷಣ ಕೈತೊಳೆದುಕೊಳ್ಳುವುದು ಮುಖ್ಯ. ಇದರಿಂದ ಸೋಂಕು ದೇಹ ಪ್ರವೇಶಿಸಿದಂತೆ ನೋಡಿಕೊಳ್ಳಬಹುದು.

ನಿಮಗೆ ಗೊತ್ತಾ? ನೀವು ಪ್ರತಿನಿತ್ಯ ಬಳಸುವ ಮೊಬೈಲ್ ಫೋನ್ ಟಾಯ್ಲೆಟ್ ಗಿಂತಲೂ ಅಧಿಕ ವೈರಾಣುಗಳನ್ನು ಹೊಂದಿರುತ್ತದೆ. ಇದನ್ನು ಎಲ್ಲೆಂದರಲ್ಲಿ ಇರಿಸುವುದರಿಂದ ಅದನ್ನು ಬಳಸುವುದರಿಂದ ಸೋಂಕು ತಗುಲುವ ಅಪಾಯ ಹೆಚ್ಚು.

ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಜಿಂಕ್ ಪ್ರಮಾಣವಿದ್ದರೆ ವೈರಾಣುಗಳ ವಿರುದ್ಧ ಹೋರಾಡುತ್ತದೆ. ಹಾಗೆಯೇ ವಿಟಮಿನ್ ಸಿ ಅಂಶವಿರುವ ಹೆಚ್ಚು ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ