ಹೆರಿಗೆ ನೋವು ಕಡಿಮೆ ಮಾಡುವುದು ಹೇಗೆ?

ಮಂಗಳವಾರ, 24 ಜನವರಿ 2017 (11:34 IST)
ಬೆಂಗಳೂರು: ಎಲ್ಲಾ ಗರ್ಭಿಣಿಯರಿಗೂ  ಹೆರಿಗೆ ನೋವು ಎದುರಿಸುವ ಚಿಂತೆ ಇದ್ದೇ ಇರುತ್ತದೆ. ಆ ಯಮ ಯಾತನೆ ಕಡಿಮೆ ಮಾಡಲು ಏನಾದರೂ ಉಪಾಯವಿದೆಯಾ ಎಂಬುದು ಎಲ್ಲರ ಪ್ರಶ್ನೆ. ಹೊಸ ಅಧ್ಯಯನವೊಂದು ಅದಕ್ಕೆ ಪರಿಹಾರ ನೀಡಿದೆ.
 

ಹೆರಿಗೆ ಸಮಯದಲ್ಲಿ ಹೆಚ್ಚು ಗ್ಲುಕೋಸ್ ಸಪ್ಲಿಮೆಂಟ್ ನೀಡುವುದರಿಂದ ಬೇಗನೇ ಹೆರಿಗೆಯಾಗುತ್ತದಂತೆ. ತುಂಬಾ ಹೊತ್ತು ಅಂದರೆ ಒಂದು ದಿನದವರೆಗೆಲ್ಲಾ ಹೆರಿಗೆ ನೋವು ಅನುಭವಿಸುವ ತೊಂದರೆ ತಪ್ಪಿಸಬೇಕಾದರೆ ಹೆರಿಗೆ ಸಮಯದಲ್ಲಿ ಗ್ಲುಕೋಸ್ ಅಂಶ ಹೆಚ್ಚು ದೇಹಕ್ಕೆ ಒದಗಿಸುತ್ತಿರಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಸುದೀರ್ಘ ಸಮಯ ನೋವು ಅನುಭವಿಸುವುದೆಂದರೆ, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಇಂತಹ ಉಪಾಯಗಳನ್ನು ಮಾಡಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ.

ಈ ಅಧ್ಯಯನಕ್ಕಾಗಿ ಸುಮಾರು 200 ಗರ್ಭಿಣಿ ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಸಂಶೋಧನೆ ಸಂದರ್ಭ ಹೆರಿಗೆ ಅವಧಿಯನ್ನು ಸುಮಾರು 76 ನಿಮಿಷ ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ. ಇದು ಕಡಿಮೆ ಖರ್ಚಿನ, ಸುರಕ್ಷಿತ ಉಪಾಯ ಎನ್ನುವುದು ಸಂಶೋಧಕರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ