ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತಾರೆ. ಹಾಗಿದ್ದರೇ ಚೆನ್ನ. ಜಗಳವಾದ ಮೇಲೆ ಇಬ್ಬರೂ ಪರಸ್ಪರ ತಬ್ಬಿಕೊಳ್ಳುವುದರಿಂದ ಸಾಕಷ್ಟು ಲಾಭವಿದೆ ಎಂದು ಇತ್ತೀಚೆಗಿನ ಅಧ್ಯಯನ ವರದಿಯೊಂದು ಹೇಳಿದೆ.
ಇಬ್ಬರೂ ಪರಸ್ಪರ ಜಗಳವಾಡಿದ ಮೇಲೆ ಒಬ್ಬರಿಗೊಬ್ಬರು ಗಟ್ಟಿಯಾಗಿ ತಬ್ಬಿಕೊಳ್ಳುವುದರಿಂದ ಮನಸ್ಸು ಹಗುರವಾಗುವುದಲ್ಲದೆ, ಮೂಡ್ ಕೂಡಾ ಬದಲಾಗುತ್ತದೆ. ಇದರಿಂದ ಜಗಳವಾಡಿದ ಮೇಲೆ ಉಂಟಾಗುವ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ದಂಪತಿ ಈ ರೀತಿ ಪರಸ್ಪರ ದೇಹ ಸ್ಪರ್ಶ ಮಾಡುವುದರಿಂದ ಅವರ ಸಂಬಂಧ ಸುಧಾರಣೆಯಾಗುತ್ತದೆ. ಮತ್ತು ಜಗಳದ ನಂತರ ಬರುವ ಮನೋದೈಹಿಕ ಕ್ಷೋಬೆಗಳು ನಿವಾರಣೆಯಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.